Ad Widget .

ಮಂಗಳೂರು: ಹೊಸ ಅಡಿಕೆ ದರದಲ್ಲಿ ಏರಿಕೆ

ಸಮಗ್ರ ನ್ಯೂಸ್: ಹೊಸ ಅಡಿಕೆ (ಚಾಲಿ) ದರದಲ್ಲಿ ಏರಿಕೆಯಾಗಿದ್ದು, ಇಲ್ಲಿನ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹400 ಧಾರಣೆ ದೊರೆತಿದೆ. ಜೂನ್-ಜುಲೈ ತಿಂಗಳಿನಲ್ಲಿ ಕೆ.ಜಿಗೆ ₹375ರಿಂದ ₹385ರ ಆಸುಪಾಸಿನಲ್ಲಿದ್ದ ದರವು ಆಗಸ್ಟ್ ಮೊದಲ ವಾರದಲ್ಲಿ ತುಸು ಏರಿಕೆಯಾಗಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಡಿಕೆ ವಹಿವಾಟು ನಡೆಸುವ ಕ್ಯಾಂಪ್ಕೊದಲ್ಲಿ ಶುಕ್ರವಾರ ಗರಿಷ್ಠ ದರ ₹390 ಇದ್ದರೆ, ಸುಳ್ಯ ತಾಲ್ಲೂಕು ಬೆಳ್ಳಾರೆಯ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹400 ದರ ದಾಖಲಾಯಿತು.

Ad Widget . Ad Widget . Ad Widget .

ಮಾರ್ಚ್‌ ಎರಡನೇ ವಾರದಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ ₹352 ಇದ್ದರೆ, ಏಪ್ರಿಲ್ 4ರಂದು ₹365 ಇತ್ತು. ಮೇ ತಿಂಗಳ ಕೊನೆಯಲ್ಲಿ ₹380ಕ್ಕೆ ತಲುಪಿದ್ದ ದರವು, ಜೂನ್‌ನಲ್ಲಿ ಒಮ್ಮೆ ಕುಸಿದಿತ್ತು. ನಂತರ ಆಗಸ್ಟ್ ಮೊದಲ ವಾರದವರೆಗೆ ಬಹುತೇಕ ಸ್ಥಿರವಾಗಿತ್ತು.

‘ಸಣ್ಣ ಹಾಗೂ ಅತಿಸಣ್ಣ ರೈತರ ಬಳಿ ಅಡಿಕೆ ಸಂಗ್ರಹವಿಲ್ಲ. ಸಾಮಾನ್ಯವಾಗಿ ಬೆಳೆ ಬಂದ ಕೂಡಲೇ ಅವರು ಮಾರಾಟ ಮಾಡುವುದರಿಂದ ಶೇ 40ರಷ್ಟು ಉತ್ಪನ್ನ ಉಳಿದಿರಬಹುದು. ದೊಡ್ಡ ಹಿಡುವಳಿದಾರರು, ಇನ್ನಷ್ಟು ದರದ ನಿರೀಕ್ಷೆಯಲ್ಲಿ ದಾಸ್ತಾನು ಇಟ್ಟುಕೊಳ್ಳಬಹುದು. ಹೀಗಾಗಿ, ಮಾರುಕಟ್ಟೆಯಲ್ಲಿ ಆವಕ ಹೆಚ್ಚು ಆಗುತ್ತಿಲ್ಲ’ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹೇಳಿದ್ದಾರೆ.

Leave a Comment

Your email address will not be published. Required fields are marked *