ಸಮಗ್ರ ನ್ಯೂಸ್: 2024 ರ ಒಲಿಂಪಿಕ್ಸ್’ನಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯನ್ನ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಜಾಗೊಳಿಸಿದೆ ಎಂದು ವರದಿಯಾಗಿದೆ.
ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಬೆಳ್ಳಿ ಪದಕಕ್ಕಾಗಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (CAS)ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದರ ವಿಚಾರಣೆ ಈಗಾಗಲೇ ಮುಗಿದಿದೆ, ಆದರೆ ತೀರ್ಪಿನ ದಿನಾಂಕವನ್ನು ನಿರಂತರವಾಗಿ ಮುಂದೂಡಲಾಗುತ್ತಿತ್ತು.
ಸಧ್ಯ ಈ ಪ್ರಕರಣದಲ್ಲಿ ಇಂದು (ಆಗಸ್ಟ್ 14) ನಿರ್ಧಾರ ಬಂದಿದೆ. ವಿನೇಶ್ ಅವರ ಮನವಿಯನ್ನ ಸಿಎಎಸ್ ವಜಾಗೊಳಿಸಿದೆ. ಇದರರ್ಥ ಈಗ ಅವರು ಬೆಳ್ಳಿ ಪದಕವನ್ನು ಪಡೆಯುವುದಿಲ್ಲ.