Ad Widget .

ಪುತ್ತೂರು: ಭಿನ್ನಕೋಮಿನ ಜೋಡಿಗೆ ರೂಂ ನೀಡಿದ ಲಾಡ್ಜ್ ಗೆ ಪೊಲೀಸ್ ದಾಳಿ| ದಾಳಿ ವೇಳೆ ಗೊತ್ತಾದ ಅಸಲಿ ಸತ್ಯ ಏನು?

ಸಮಗ್ರ ನ್ಯೂಸ್: ಹಿಂದೂ ಯುವತಿ- ಮುಸ್ಲಿಂ ಯುವಕ ಜೋಡಿಗೆ ರೂಂ ನೀಡಿದ ಲಾಡ್ಜ್ ಒಂದಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಹರು ನಗರದಲ್ಲಿ ನಡೆದಿದೆ. ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

Ad Widget . Ad Widget .

ನೆಹರು ನಗರದಲ್ಲಿರುವ ಲಾಡ್ಜ್‌ಗೆ ಪೊಲೀಸರು ದಾಳಿ ನಡೆಸಿದ್ದು, ರಿಸೆಪ್ಶನಿಸ್ಟ್ ಹಾಗೂ ಲೆಡ್ಜರ್ ಪುಸ್ತಕವನ್ನು ವಶಕ್ಕೆ ಪಡೆದಿದ್ದಾರೆ. ಯುವಕ- ಯುವತಿಯಿಂದ ಯಾವುದೇ ದಾಖಲೆಗಳನ್ನು ತೆಗೆದುಕೊಳ್ಳದೆ ರೂಮ್ ನೀಡಲಾಗಿದೆ ಎನ್ನುವ ಆರೋಪದ ಮೇರೆಗೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Ad Widget . Ad Widget .

ತಡ ರಾತ್ರಿ ಇನೋವಾ ಕಾರಿನಲ್ಲಿ ಬಂದ ತಂಡವೊಂದಕ್ಕೆ ರೂಂ ನೀಡಿರುವುದೇ ದಾಳಿಗೆ ಕಾರಣ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನೋವಾದಲ್ಲಿ ಬಂದ ವ್ಯಕ್ತಿಗಳ ಬಳಿ ಸರಿಯಾದ ದಾಖಲಾತಿ ಪಡೆದುಕೊಳ್ಳದೆ ರೂಂ ನೀಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡುತ್ತಿದ್ದಾರೆ. ಇನ್ನೊವಾದಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಜೋಡಿ ಇತ್ತು ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.

ಪುತ್ತೂರಿನ ಹೊರವಲಯವಾದ ನೆಹರು ನಗರದಲ್ಲಿರುವ ಈ ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪೋಲೀಸರು ರೇಡ್‌ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಪುತ್ತೂರು ನಗರ ಠಾಣೆ ಎಎಸ್‌ಐ ಅಂಜನೇಯ ರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಲಾಡ್ಜ್‌ಗೆ ತೆರಳಿ ತನಿಖೆ ನಡೆಸಿದೆ.

ಮಾಹಿತಿಯಂತೆ ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ ಕೊಠಡಿ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದ ಜೋಡಿಯನ್ನು ವಿಚಾರಣೆ ನಡೆಸಿದಾಗ ಅವರು ಒಂದೇ ಧರ್ಮಕ್ಕೆ ಸೇರಿದ ಬೆಂಗಳೂರು ಮೂಲದ ದಂಪತಿಗಳೆಂದು ತಿಳಿದುಬಂದಿದೆ ಎನ್ನಲಾಗಿದೆ. ಈ ಬಗ್ಗೆ ಲಾಡ್ಜ್ ನ ಮಾಲಕರು ಪ್ರತಿಕ್ರಿಯೆ ನೀಡಿದ್ದು, 4 ವರ್ಷಗಳ ಹಿಂದೆಯೇ ಅಗ್ರಿಮೆಂಟ್‌ ಮೂಲಕ ಲಾಡ್ಜ್ ನಡೆಸಲು ಬೇರೊಂದು ಸಂಸ್ಥೆಗೆ ಕೊಟ್ಟಿರುತ್ತೇವೆ. ಘಟನೆಯ ಬಗ್ಗೆ ನಮಗೆ ಹೆಚ್ಚೇನು ತಿಳಿದಿಲ್ಲ ಎಂದಿದ್ದಾರೆ.

Leave a Comment

Your email address will not be published. Required fields are marked *