ಸಮಗ್ರ ನ್ಯೂಸ್: ಪುತ್ತೂರು ಕೃಷ್ಣನಗರದ ಬನ್ನೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘವನ್ನು ಆ. 10ರಂದು ರಚಿಸಲಾಯಿತು.
ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸೌಮ್ಯಶ್ರೀ ಶಿವಪ್ರಸಾದ್ ಹೆಗ್ಡೆ, ಉಪಾಧ್ಯಕ್ಷರಾಗಿ ಕಾವ್ಯ ಕೆ., ಕಾರ್ಯದರ್ಶಿಯಾಗಿ ಶಾಲಾ ಪ್ರಾಂಶುಪಾಲೆ ಸವಿತಾ ರವರು ಆಯ್ಕೆಯಾದರು. ಹಾಗೂ ಸದಸ್ಯರಾಗಿ ಯೋಗೀಶ್, ಸುಮಲತಾ, ಅಶ್ವಿನಿ, ರಾಧಿಕಾ ಹರೀಶ್ ಕೆ. ತೆಂಕಪಾಡಿ ಇವರು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರು ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ, ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ ರವರು ಶಾಲೆಯ ನಿಯಮ ಹಾಗೂ ಪೋಷಕರ ಪಾತ್ರದ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷ ಉಮೇಶ್ ಗೌಡ ಮಳುವೇಲು ಹಾಗು ನಿರ್ದೇಶಕಿ ಪುಷ್ಪಾವತಿ ಗೌಡ ಕಳುವಾಜೆ ಶುಭಕೋರಿದರು.
ಪ್ರಾಂಶುಪಾಲರಾದ ಸವಿತಾ ಕುಮಾರಿ ಸ್ವಾಗತಿಸಿ, ಶಾಲೆಯ ಶೈಕ್ಷಣಿಕ ವಿಷಯಗಳ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕಿ ರೀಮಾ ಲೋಬೊ ವಂದಿಸಿ, ಶಿಕ್ಷಕಿ ರಾಧಾ ಮತ್ತು ಪ್ರಕ್ಷುತ ರವರು ಕಾರ್ಯಕ್ರಮ ನಿರೂಪಿಸಿದರು.