Ad Widget .

ಪ್ರಧಾನಿ ಮೋದಿಯ ಗಡ್ಡ ಎಳೆದು‌ ಮುದ್ದಾಡುತ್ತಿರುವ ಈ ಬಾಲೆಯ ಹಿನ್ನೆಲೆ ಗೊತ್ತೇ? ಕರುಳು ಹಿಂಡುವ ಸ್ಟೋರಿ ಇಲ್ಲಿದೆ ನೋಡಿ…

ಸಮಗ್ರ ನ್ಯೂಸ್: ಮೋದಿಯ ಗಡ್ಡ ಹಿಡಿದು ಎಳೆದು, ಮೋದಿಯ ಕನ್ನಡಕ ಮುಟ್ಟುತ್ತಾ, ಮುದ್ದಾಡುತ್ತಿರುವ ಮೂರು ವರ್ಷದ ಆ ಮಗಳ ವೀಡಿಯೋ ವೈರಲ್‌ ಆಗುತ್ತಿದೆ. ಆ ವಿಡಿಯೋ ನೋಡುತ್ತಿದ್ದರೆ ಎಂಥವರ ಮುಖದಲ್ಲಿಯೂ ನಗು ಮೂಡುವುದು. ಆ ಮಗುವಿಗೆ ತನ್ನ ಎದುರಿಗಿರುವುದು ಪ್ರಧಾನಿಯೆಂದು ಗೊತ್ತಿಲ್ಲ, ಆದರೆ ಆ ವ್ಯಕ್ತಿಯನ್ನು ನೋಡಿದಾಗ ಮಗುವಿಗೆ ರಕ್ಷಕಂತೆ ಅಥವಾ ತುಂಬಾ ಆಪ್ತನಂತೆ ಅನಿಸಿರಬಹುದು, ಇಲ್ಲದಿದ್ದರೆ ಹತ್ರಕ್ಕೂ ಬರಲ್ಲ, ಆದರೆ ಈ ಮಗು ಮೋದಿಯನ್ನು ತುಂಬಾ ಚೆನ್ನಾಗಿ ಗೊತ್ತಿರುವಂತೆ ಮೋದಿಯನ್ನು ಅಪ್ಪಿಕೊಂಡು ಬಿಳಿಗಡ್ಡ ಎಳೆದು ಮೋದಿಯನ್ನು ಮುದ್ದು ಮಾಡುತ್ತಿರುವ ಕ್ಯೂಟ್‌ ವೀಡಿಯೋ ವೈರಲ್‌ ಆಗುತ್ತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೋದಿ ವಯನಾಡ್‌ ದುರಂತ ನಡೆದ ಸ್ಥಳ ವೀಕ್ಷಣೆಗೆ ಬಂದಾಗ ಅಲ್ಲಿಯ ಸಂತ್ರಸ್ಥರನ್ನು ಭೇಟಿಯಾಗಿದ್ದರು, ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಜನರನ್ನು ಭೇಟಿಯಾದರು, ಆವಾಗ ತನ್ನ ತಾಯಿ ಇದ್ದ ಮೂರು ವರ್ಷದ ಈ ಹೆಣ್ಮಗುವನ್ನು ಮೋದಿ ಮಾತನಾಡಿಸಿದಾಗ ಆ ಮಗು ಖುಷಿಯಿಂದ ಮೋದಿಯನ್ನು ಮುದ್ದು ಮಾಡುತ್ತಿರುವ ವೀಡಿಯೋ ಇದಾಗಿದೆ. ಆ ಮಗುವಿನ ನಗು, ತುಂಟಾಟ ನೋಡಿ ಮೋದಿಯವರು ಮಾತ್ರವಲ್ಲ ಇಡೀ ರಾಷ್ಟ್ರದ ಜನತೆ ಮನಸೋತಿದೆ, ಅಯ್ಯೋ ಮುದ್ದು ನೀನು ಹೀಗೆ ನಗು ನಗುತ್ತಾ ಇರು ಎಂದು ಹಾರೈಸುತ್ತಿದ್ದಾರೆ.

Ad Widget . Ad Widget . Ad Widget .

ವಯನಾಡ್‌ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡು ಒಂಟಿಯಾಗಿರುವ ನೂರಾರು ಕಣ್ನೀರಿನ ಕತೆಗಳಿವೆ, ಅದರಲ್ಲೊಂದು ಈ ಮಗುವಿನ ಕತೆ. ಈ ವಯನಾಡ್‌ ದುರಂತದ ಬಗ್ಗೆ ಮಾತನಾಡುತ್ತಾ ಆ ಮಗುವಿನ ತಾಯಿ ಹೇಳುತ್ತಾರೆ, ಈ ದುರಂತದಲ್ಲಿ ನಾನು ನನ್ನ ಇಬ್ಬರು ಗಂಡು ಮಕ್ಕಳನ್ನು, ಗಂಡನನ್ನು ಕಳೆದುಕೊಂಡೆ, ನಮ್ಮ ಕುಟುಂಬದ ಎಲ್ಲರೂ ಹೋದರು, ಈಗ ಉಳಿದಿರುವುದು ನಾನು, ನನ್ನ ಈ ಮೂರು ವರ್ಷದ ಮಗಳು ಮಾತ್ರ… ಆ ಪುಟ್ಟ ಕಂದಮ್ಮ ತನ್ನ ಅಣ್ಣಂದಿರು, ಅಪ್ಪ-ಅಜ್ಜ ಎಲ್ಲರನ್ನೂ ಒಂದೇ ದಿನದಲ್ಲಿ ಕಳೆದುಕೊಂಡಿದೆ.

ವಯನಾಡ್‌ ದುರಂತದ ಬಳಿಕ ಪ್ರಧಾನಿ ಮೋದಿಯವರನ್ನು ಕೇರಳದ ಜನತೆ ಪ್ರೀತಿಸಲಾರಂಭಿಸಿದ್ದಾರೆ, ತಮಗೊಂದು ಆಪತ್ತು ಬಂದಾಗ ತಕ್ಷಣವೇ ಸೇನೆ ಕಳುಹಿಸಿ ನಮ್ಮ ಕಷ್ಟಕ್ಕೆ ನೆರವಾದ ಕೇಂದ್ರ ಸರ್ಕಾರದ ಸ್ಪಂದನೆ ಜನರ ಮನ ಮುಟ್ಟಿದೆ, ದುರಂತ ನಡೆದ ಸ್ಥಳವನ್ನು ಪ್ರಧಾನಿಯವರು ಬಂದು ನೋಡಬೇಕು ಆವಾಗ ಇಲ್ಲಿಯ ಭೀಕರತೆ ಸ್ಪಷ್ಟ ಚಿತ್ರಣ ಅವರಿಗೆ ಸಿಗುತ್ತದೆ ಎಂದು ಜನ ಅಂದುಕೊಂಡಿದ್ದರು.

ಅದರಂತೆ ವಯನಾಡ್‌ಗೆ ಮೋದಿ ಭೇಟಿ ನೀಡಿ ದುರಂತ ನಡೆದ ಸ್ಥಳದಲ್ಲಿ ಓಡಾಡಿದರು, ಅಲ್ಲಿಯ ಸಂತ್ರಸ್ಥರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ನಿಮಗೆ ಏನು ಅವಶ್ಯಕತೆ ಇದೆ ನನಗೆ ತಿಳಿಸಿ, ನಾವು ನಿಮ್ಮ ಸಹಾಯಕ್ಕೆ ಸದಾ ಸಿದ್ಧ ಎಂದು ಹೇಳುವ ಮೂಲಕ ಅಲ್ಲಿದದ್ದವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.

ಮೋದಿ ಭೇಟಿ ಬಳಿಕ ಅಲ್ಲಿಯ ಮಾಧ್ಯಮದವರು ವಯನಾಡ್‌ನ ಜನತೆ ಬಳಿ ನಿಮಗೆ ಮೋದಿಯವರ ಮೇಲೆ ನಂಬಿಕೆ ಇದೆಯೇ ಎಂದು ಕೇಳಿದಾಗ ಅವರು ಹೆಳುತ್ತಾರೆ, ಹೌದು ಶೇ.100ರಷ್ಟು ನಂಬುತ್ತೇವೆ. ಕೇಂದ್ರದಿಂದ ಅನುದಾನ ಬಂದರೆ ಅದು ಯಾರ ಪಾಲಾಗದೆ ಸೀದಾ ನಮಗೆ ತಲುಪುತ್ತದೆ, ಅದೇ ಕಳೆದ ಬಾರಿ ಸುನಾಮಿ ದುರಂತದಲ್ಲಿ ಸಂತ್ರಸ್ಥರಿಗೆ ಬಂದ ಹಣವನ್ನು ಹೇಗೆ ಸ್ವಂತ ಲಾಭಕ್ಕೆ ಬಳಸಿಕೊಂಡರು ಎಂಬುವುದನ್ನು ನೋಡಿದ್ದೇವೆ, ಅದೇ ಪ್ರಧಾನಿ ಮೋದಿಯವರ ಸಹಾಯ ಸೀದಾ ಫಲಾನುಭವಿಗಳಿಗೇ ತಲುಪಲಿದೆ ಎಂದು ಹೇಳಿರುವ ವೀಡಿಯೋ ವೈರಲ್‌ ಆಗಿದೆ.

Leave a Comment

Your email address will not be published. Required fields are marked *