Ad Widget .

ಕರಾವಳಿಯಲ್ಲಿ ಆಟಿ‌ ಅಮಾವಾಸ್ಯೆ ಸಂಭ್ರಮ| ಪುಣ್ಯ‌ ಸ್ನಾನಗೈದು ಪುಳಕಿತರಾದ ಭಕ್ತರು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಸಿದ್ಧ ಪರ್ವತ ಪುಣ್ಯ ಕ್ಷೇತ್ರಗಳಾದ ಕಾರಿಂಜ ಕಾರಿಂಜೇಶ್ವರ ಸನ್ನಿಧಿ ಹಾಗೂ ನರಹರಿ ಸದಾಶಿವ ರುದ್ರ ಸನ್ನಿಧಿಯಲ್ಲಿ ಇಂದು (ಆಗಸ್ಟ್ 4) ನಸುಕಿನ ಜಾವ ಭಕ್ತರ ಗಡಣವಿತ್ತು. ವೈದಿಕರು ವೇದಮಂತ್ರಗಳ ಪಠಣವನ್ನು ಮಾಡುತ್ತಿದ್ದರೆ, ಭಕ್ತರು, ತೀರ್ಥಸ್ನಾನ ಮಾಡಿ ಪುನೀತರಾದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಆಟಿಯ ಅಮಾವಾಸ್ಯೆ ಅಥವಾ ಆಟಿ ಅಮಾಸೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ತುಳುನಾಡಿನ ಆಚರಣೆ ಈ ಅಮಾವಾಸ್ಯೆ ಆಷಾಡ ಅಮಾವಾಸ್ಯೆ. ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ನಾನಾ ಶಿವ ಸನ್ನಿಧಿಗಳಲ್ಲಿರುವ ಪುಷ್ಕರಿಣಿಗಳಲ್ಲಿ ತೀರ್ಥ ಸ್ನಾನದ ಸಂಭ್ರಮ ಐತಿಹಾಸಿಕ ಹಿನ್ನೆಲೆ ಇರುವ ಮಹತೋಭಾರ ಕಾರಿಂಜ ಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ನಡೆಯುವ ತೀರ್ಥಸ್ನಾನಕ್ಕೆ ವಿಶೇಷ ಮನ್ನಣೆ.

Ad Widget . Ad Widget . Ad Widget .

ಪಾಲೆದ ಕೆತ್ತೆ ಕಷಾಯ:
ಆಟಿಯ ಅಮಾವಾಸ್ಯೆಯ ದಿನ ತುಳುನಾಡಿನ ಜನರು ಬೆಳ್ಳಗೆ ಬೇಗನೇ ಎದ್ದು, ಹಾಲೆಯ ಮರದ ಕೆತ್ತೆಯನ್ನು ಕಲ್ಲಿನಲ್ಲಿ ಜಜ್ಜಿ ತಂದು, ಕಶಾಯ ಮಾಡಿ, ಸ್ನಾನ ಮಾಡಿ, ಕಷಾಯವನ್ನು ಕುಡಿದು. ದೇವಸ್ಥಾನಕ್ಕೆ ಹೋಗಿ ತೀರ್ಥಸ್ನಾನ ಮಾಡುವ ವಾಡಿಕೆ ಇದೆ.

ಶಂಖ, ಚಕ್ರ, ಗದಾ, ಪದ್ಮ ತೀರ್ಥಗಳು:
ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಪ್ರಕೃತಿ ಸೌಂದರ್ಯದ ಮಡಿಲು. ಭೂಲೋಕದ ಕೈಲಾಸ ನರಹರಿ ಪರ್ವತದಲ್ಲಿ ಭಾನುವಾರ ಆಟಿ ಅಮಾವಾಸ್ಯೆಯ ಪವಿತ್ರ ತೀರ್ಥಸ್ನಾನ ನಡೆಯಿತು. ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ ಸಪ್ತವರ್ಣ ಪಾಲೆಯ ಮರದ ರಸವನ್ನು ಸೂರ್ಯೊದಯದ ಮೊದಲು ಸೇವಿಸುವ ತುಳುನಾಡಿನ ಪರಂಪರೆಯ ದಿನ ಆಟಿ ಅಮಾವಾಸ್ಯೆ ಪವಿತ್ರವಾಗಿದ್ದು ಮುಂಜಾನೆಯೇ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗಧಾ, ಪದ್ಮ ಗಳೆಂಬ ನಾಲ್ಕು ಕೂಪಗಳಲ್ಲಿ ಮಿಂದು ವಿನಾಯಕ ಸದಾಶಿವ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.

ಪಾಣೆಮಂಗಳೂರು ಗೋಳ್ತಮಜಲು ಮತ್ತು ಅಮ್ಟೂರು ಮೂರು ಗ್ರಾಮಗಳ ತ್ರಿವೇಣಿ ಸಂಗಮದ ಗಡಿ ಪ್ರದೇಶದಲ್ಲಿ ರಮ್ಯ ಮನೋಹರ ಹಚ್ಚ ಹಸಿರಿನಿಂದ ಕಂಗೊಳಿಸುವ ಪರ್ವತ ಬರೀ ದೇಗುಲವಲ್ಲ. ನಿಸರ್ಗ ಪ್ರಿಯರಿಗೆ ಪ್ರಕೃತಿ ಸೌಂದರ್ಯದ ಮಡಿಲು ಭಾವುಕರಿಗೆ ನಂದಗೋಕುಲ ನೊಂದವರಿಗೆ ಶಾಂತಿಧಾಮ ಎನ್ನಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ಪರ್ವತದ ತುತ್ತ ತುದಿಯವರೆಗೆ ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

Leave a Comment

Your email address will not be published. Required fields are marked *