ಸಮಗ್ರ ನ್ಯೂಸ್: ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಈ ವಾರ ನಿಮ್ಮ ರಾಶಿಗಳ ಗೋಚಾರಫಲ ಏನು? ಯಾರಿಗೆ ಲಾಭ? ಯಾವ ರಾಶಿಗೆ ಶುಭ? ಇಲ್ಲಿದೆ ಸಂಪೂರ್ಣ ಮಾಹಿತಿ…
ಮೇಷರಾಶಿ:
ಸುಖವಾಗಿ ಬಾಳಬೇಕಾದರೆ ಗುರುಕಟಾಕ್ಷ ಇರಲೇಬೇಕು. ಸಾಧನೆ ಮಾಡಬೇಕಾದರೆ ಸಂಕಲ್ಪ, ಮನಶ್ಶಾಂತಿ ಇರಬೇಕು. ನಾನು ಕೆಲಸವನ್ನು ಮಾಡಿಯೇ ತೀರುತ್ತೇನೆ ಎಂಬ ಛಲವೂ ಇರಬೇಕು. ಇದರೊಂದಿಗೆ ಆರೋಗ್ಯವು ನಮ್ಮನ್ನು ಕೂಡಿಕೊಂಡು ಇರಬೇಕಾದರೆ ದ್ವಿತೀಯ ಗುರು ದತ್ತ ದೇವರನ್ನು ಪ್ರಾರ್ಥಿಸಿ, ಲಗ್ನಾಧಿಪತಿ ಕುಜನು ವೃಷಭದಲ್ಲಿ ಇರುವು ದರಿಂದ ಆರು ಮುಖವುಳ್ಳ 12 ಭುಜವುಳ್ಳ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.
ವೃಷಭ ರಾಶಿ:
ಗುರು ಪುರುಷರಲ್ಲಿ ಇರುವುದರಿಂದ ಗುರು ನರಸಿಂಹನನ್ನು ಪೂಜಿಸಿದರೆ ಬೇಕಾದ ವರವನ್ನು ಪಡೆದುಕೊಳ್ಳಬಹುದು. ಅಹೋಬಲ ನರಸಿಂಹನನ್ನು ದರ್ಶಿಸಿ ಒಳ್ಳೆಯ ಫಲವು ಸಿಕ್ಕಿ ನೀವು ಸಿಲುಕಿಕೊಂಡಿರುವ ಪೊದೆಯಿಂದ ಆಚೆ ಬರಬಹುದು. ಜತೆಗೆ ರಾಜಯೋಗವನ್ನು ಪಡೆಯಲು ಪಳನಿಯ ಸುಬ್ರಹ್ಮಣ್ಯನನ್ನು ಪೂಜಿಸಿ.
ಮಿಥುನ ರಾಶಿ:
ಮಿಥುನ ಅಧಿಪತಿ ಬುಧನು ಸೂರ್ಯನ ಮನೆಯಲ್ಲಿ ಇದ್ದು ಸೂರ್ಯನು ದ್ವಿತೀಯದಲ್ಲಿ ಶುಕ್ರನೊಂದಿಗೆ ಕರ್ಕಾಟಕ ರಾಶಿಯಲ್ಲಿ ಇರುವುದು ಶುಭ ಸೂಚನೆ. ಆದರೆ 12ರಲ್ಲಿ ಗುರುವು ಇದ್ದಾನೆ. ಈ ಎಲ್ಲಾ ಗ್ರಹಗಳು ಶುಭಫಲವನ್ನು ನೀಡಬೇಕಾದರೆ ಗುರುವಿನ ಮೊರೆ ಹೋಗದೆ ಅನ್ಯ ಮಾರ್ಗವಿಲ್ಲ. ಶಾಸ್ತ್ರಗಳು ಸಾರುವಂತೆ ವಿಷ್ಣುವನ್ನು ಶಿವನನ್ನು ಏಕಕಾಲದಲ್ಲಿ ಅರ್ಜಿಸಿದರೆ ಶುಭ ಫಲವನ್ನು ಪಡೆಯಬಹುದು.
ಕಟಕ ರಾಶಿ:
ಏಕಾದಶದಲ್ಲಿ ಗುರು ಲಗ್ನದಲ್ಲಿ ಸೂರ್ಯನು ಧನವನ್ನು ಕೊಡಲು ಶುಕ್ರನೊಂದಿಗೆ ಸೇರಿದ್ದಾನೆ. ನಿಮ್ಮ ಪುಣ್ಯ ಫಲದಿಂದ ನಿಮಗೆ ಧನವು ದೊರೆಯಲು ಗುರುಕಟಾಕ್ಷವು ಬೇಕೇ ಬೇಕು. ಗುರು ದತ್ತಾತ್ರೇಯನನ್ನು ಪೂಜಿಸಿದರೆ ಧೈರ್ಯ ಸ್ಥೈರ್ಯ ತುಂಬಿ ಸತ್ಕೀರ್ತಿ ತರುತ್ತಾನೆ. ಸೂರ್ಯನಾರಾಯಣನನ್ನು ಪೂಜಿಸಿ. ಸೂರ್ಯ ಅಷ್ಟೋತ್ತರ ಪಾರಾಯಣ ಮಾಡಿ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಲಗ್ನದಲ್ಲಿ ಬುಧನು ದ್ವಾದಶದಲ್ಲಿ ಶುಕ್ರನು ವಕ್ರಿಯಾಗಿ ಗುರು ನವಮದಲ್ಲಿದ್ದು, ಸಿಂಹ ರಾಶಿಯವರಿಗೆ ಪೂರ್ವ ಪುಣ್ಯದ ವಿಶೇಷದಿಂದ ಗ್ರಹಗಳು ವಿಶೇಷ ಫಲವನ್ನು ಕೊಟ್ಟು ದೈವವೇ ನಿಮ್ಮನ್ನು ಕಾಪಾಡುತ್ತದೆ. ಸೂರ್ಯನಾರಾಯಣ ದೇವರನ್ನು ಪ್ರಾರ್ಥಿಸಿ, ಸದ್ಯ ಮಹಾವಿಷ್ಣುವನ್ನು ಮಖಾ ನಕ್ಷತ್ರಾಧಿಪತಿ ಕೇತುವನ್ನು, ನಾಗದೇವರನ್ನು ಪೂಜಿಸಿ ಇಷ್ಟಾರ್ಥವನ್ನು ಪಡೆದುಕೊಳ್ಳಿ.
ಕನ್ಯಾ ರಾಶಿ:
ಶನಿ ವಕ್ರಗತಿಯಲ್ಲಿದ್ದಾನೆ. ಗುರು ಕುಜನ ಜತೆ ಇರುವುದರಿಂದ ಕೆಲಸಗಳು ನಿಧಾನವಾಗಿ ನಡೆದರೂ ಅಡಚಣೆ ಇಲ್ಲದೆ ಕಾರ್ಯ ಸಾಧನೆ ಮಾಡಿಕೊಳ್ಳಬಹುದು. ಋಣ ರೋಗ ದಾರಿದ್ರ್ಯ ಬರದಿರಲು ಶನಿ ಮಹಾರಾಜನ ಕ್ಷೇತ್ರವನ್ನು ಸಂದರ್ಶಿಸಿ. ಶನಿಯನ್ನು ಪೂಜಿಸಿ ನಿಮ್ಮ ಕಾರ್ಯಗಳು ದಡ ಮುಟ್ಟಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಪುರಾಣ ಪ್ರಸಿದ್ಧ ಕ್ಷೇತ್ರವಾದ ತಿರುವಣ್ಣಾಮಲೈಯಲ್ಲಿ ನೆಲೆಸಿರುವ ಅರುಣಾಚಲೇಶ್ವರನನ್ನು ಪೂಜಿಸಿ ಪ್ರಾರ್ಥಿಸಿ.
ತುಲಾ ರಾಶಿ:
ಗ್ರಹಗಳು ಮಂದಗತಿಯಲ್ಲಿ ಅಥವಾ ವಕ್ರಗತಿಯಲ್ಲಿ ಸಂಚರಿಸಿದರೂ ತೂಕದ ವ್ಯಕ್ತಿತ್ವವಾದ ನಿಮಗೆ ಯಾವ ಗ್ರಹಗಳೂ ಕಾರ್ಯ ಸಾಧನೆ ಮಾಡುವಲ್ಲಿ ಅಡ್ಡಿ ಮಾಡುವುದಿಲ್ಲ. ಹತ್ತು ದಿನಗಳ ಕಾಲ ಅಶ್ವತ್ಥ ಪ್ರದಕ್ಷಿಣೆ ಮಾಡಿದರೆ ನಕಾರಾತ್ಮಕ ಚಿಂತನೆಗಳನ್ನು ತೊಳೆದು ಹಾಕುತ್ತದೆ. ಶುಕ್ರನ ಮನೆಯಲ್ಲಿ ಗುರು ಅಂಗಾರಕನು ಇರುವುದರಿಂದ ಲಕ್ಷ್ಮೀನಾರಾಯಣನನ್ನು ಪೂಜಿಸಿ ಮನೋಇಚ್ಛೆಗಳನ್ನು ಪೂರೈಸಿಕೊಳ್ಳಿ.
ವೃಶ್ಚಿಕ ರಾಶಿ:
ಸಮತೋಲನವಾದ ವರ್ಷಧಾರೆ ಭೂಮಿಯನ್ನು ತಂಪಾಗಿಸಿ ಒಳ್ಳೆಯ ಬೆಳೆಯನ್ನು ಕೊಟ್ಟು ಪ್ರಾಣವನ್ನು ರಕ್ಷಣೆ ಮಾಡುತ್ತದೆ. ಹಾಗೆಯೇ ಹದಗೆಟ್ಟ ಹಣದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಸಕಾಲದಲ್ಲಿ ನಿಮಗೆ ಬರಬೇಕಾದ ಧನವನ್ನು ಮಹಾಲಕ್ಷ್ಮಿಯೇ ಪೂರೈಸುತ್ತಾಳೆ. ಹಣಕ್ಕಾಗಿ ಹಪಹಪಿಸಬೇಡಿ. ತಾಳ್ಮೆಯಿಂದ ಶ್ರಮ ವಹಿಸಿ ದುಡಿಯಿರಿ. ಕರವೀರ ಮಹಾಲಕ್ಷ್ಮಿಯನ್ನು ಪೂಜಿಸಿ ಪ್ರಾರ್ಥಿಸಿ. ಶುಭವಾಗುತ್ತದೆ.
ಧನಸ್ಸು ರಾಶಿ:
ಜೀವನ ಪರ್ಯಂತ ಗುರುವಿನ ಅನುಗ್ರಹ ಇದ್ದೇ ಇರುತ್ತದೆ. ಆದಾಗ್ಯೂ ವಕ್ರಗತಿಯಲ್ಲಿ ಶನಿ ಬಂದಿರುವುದರಿಂದ ಈಶ್ವರನ ಧ್ಯಾನವನ್ನು ಮಾಡಿ. ಬಿಲ್ವಾರ್ಚನೆ ಮಾಡಿಸಿ. ರುದ್ರಪಾರಾಯಣ ಮಾಡಿಸಿ ಅಥವಾ ಮಾಡಿರಿ. ಎಲ್ಲಾ ವಿಷಯಗಳಲ್ಲೂ ಅನುಕೂಲ, ಸಂತೋಷ ಹೊಂದುತ್ತೀರಿ. ಸಂದರ್ಭಾನುಸಾರ ಧನವು ಆರೋಗ್ಯವನ್ನು ಕೊಟ್ಟು ನಿಮಗೆ ನಗುಮುಖವನ್ನು ಕೊಟ್ಟು ದೇವರೇ ಕಾಪಾಡುತ್ತಾನೆ.
ಮಕರ ರಾಶಿ:
ಮತ್ತೆ ಶನಿಯು ವಕ್ರಗತಿಯಲ್ಲಿ ಲಗ್ನಕ್ಕೆ ಬಂದಿರುವುದರಿಂದ ನ. 15ರವರೆಗೆ ಎಚ್ಚರಿಕೆಯಿಂದ ಸಾಗಬೇಕು. ದೇವಸ್ಥಾನದಲ್ಲಿ ಗಂಟೆ ಹೊಡೆಯುವುದು ಮನುಷ್ಯನು ದೇವರಲ್ಲಿ ಏಕಾಗ್ರತೆಯನ್ನು ಹೊಂದಲು. ಶನಿಯಿಂದ ಪಾರಾಗಲು. ಏಕಾಗ್ರತೆಯನ್ನು ಹೊಂದಿ ಪಾರ್ವತಿ ಪರಮೇಶ್ವರರನ್ನು ಪೂಜಿಸಿ. ಅನುಕೂಲ ನಿಮಗೆ ದೊರೆಯುತ್ತದೆ.
ಕುಂಭ ರಾಶಿ:
ದ್ವಿತೀಯದಲ್ಲಿ ರಾಹು ಇರುವುದರಿಂದ ಕುಟುಂಬದವರೊಂದಿಗೆ ನಿಷ್ಠುರದಿಂದ ಮಾತನಾಡದೆ ಮೌನದಿಂದ ನಗುಮುಖದಿಂದ ಎಲ್ಲವನ್ನೂ ನಿಭಾಯಿಸಬೇಕು. ಮನೆಯ ಯಜಮಾನರು ಸಂಯಮ ಶಾಂತಿ ಹಾಳು ಮಾಡಬಾರದು, ಶಿರದಲ್ಲಿ ಚಂದ್ರನನ್ನು ಧರಿಸಿರುವ ಉಮಾಮಹೇಶ್ವರನನ್ನು ಪೂಜಿಸಿ. ಶಿವಸಹಸ್ರನಾಮ ತಪ್ಪದೆ ಪಾರಾಯಣ ಮಾಡಿ.
ಮೀನಾ ರಾಶಿ:
ಲಗ್ನದಲ್ಲಿ ರಾಹು ಇದ್ದಾನೆ. ಈ ಸಮಯದಲ್ಲಿ ಶಂಕುಲ ನಾಗದೇವರನ್ನು ಪೂಜಿಸಿ. ರಾಹು ಕೇತುಗಳು ಬದಲಾಗುವವರೆಗೂ ಮಾಸಕ್ಕೆ ಒಮ್ಮೆ ಕುಕ್ಕೆಯಲ್ಲಿ ನೆಲೆಸಿರುವ ವಾಸುಕಿ ನಾಗರಾಜ ಸುಬ್ರಮಣ್ಯ ದೇವರನ್ನು ಪೂಜಿಸಿ ಪ್ರಾರ್ಥಿಸಿ. ನಿಮ್ಮ ಚಿಂತೆಗಳು ದೂರಾಗಿ ಚತುರ್ದಿಕ್ಕುಗಳಿಂದಲೂ ಧೈರ್ಯ, ಸಹಾಯ ಕೂಡಿಬರುತ್ತದೆ. ನಿಮ್ಮ ಗುರುಗಳಿಂದ ಸುಬ್ರಮಣ್ಯ ಧ್ಯಾನ ಶ್ಲೋಕ ಅಥವಾ ಮೂಲ ಮಂತ್ರ ಉಪದೇಶ ತೆಗೆದುಕೊಂಡು ನಿತ್ಯವೂ ಪಠಿಸಿ.