ಸಮಗ್ರ ನ್ಯೂಸ್: ವಿಧಾನಸಭೆಯಲ್ಲಿ ಕೇಂದ್ರದ ನೀಟ್ ಪರೀಕ್ಷೆಯನ್ನ ರದ್ದುಗೊಳಿಸುವ ಸಂಬಂಧ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಮಂಡಿಸಿದ್ದ ಮಸೂದೆ ಅಂಗೀಕಾರಗೊಂಡಿದೆ. ನೀಟ್ ಪರೀಕ್ಷಾ ವ್ಯವಸ್ಥೆಯಿಂದ ಕರ್ನಾಟಕದ ಗ್ರಾಮೀಣ ಬಡ ಮಕ್ಕಳಿಗೆ ಹಿನ್ನಡೆ ಆಗುತ್ತಿದೆ. ವೈದ್ಯಕೀಯ ಶಿಕ್ಷಣ ಅವಕಾಶಗಳ ಮೇಲೆ ತೀವ್ರ ಹಿನ್ನಡೆ ಆಗುತ್ತಿದೆ. ಕೇಂದ್ರದ ನೀಟ್ ವ್ಯವಸ್ಥೆಯಿಂದ ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ರದ್ದು ಮಾಡಬೇಕೆಂದು ನಿರ್ಣಯ ಮಂಡಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ದೇಶವನ್ನೇ ಬೆಚ್ಚಿಬೀಳಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ವಿಧಾನ ಪರಿಷತ್ ನಲ್ಲೂ ಮಸೂದೆ ಅಂಗೀಕಾರಗೊಂಡರೆ ಮುಂದಿನ ದಿನಗಳಲ್ಲಿ ಕರ್ನಾಟಕ ತನ್ನದೇ ಆದ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸುತ್ತದೆ.
ನೀಟ್ ಪರೀಕ್ಷೆಯನ್ನು ರದ್ದುಪಡಿಸಲು ಮತ್ತು ದ್ವಿತೀಯ ಪಿಯುಸಿ ಅಂಕಗಳನ್ನು ಬಳಸಿಕೊಂಡು ರಾಜ್ಯ-ಆಧಾರಿತ ವೈದ್ಯಕೀಯ ಪ್ರವೇಶದ ಹಳೆಯ ವ್ಯವಸ್ಥೆಗೆ ಹಿಂತಿರುಗಲು ತಮಿಳುನಾಡು, ಪಶ್ಚಿಮ ಬಂಗಾಳ ಕೂಡ ಮುಂದಾಗಿದೆ. ಇದೀಗ ಕರ್ನಾಟಕ ಕೂಡ ಅದೇ ಹಾದಿಯಲ್ಲಿ ಮುಂದುವರೆಯಲು ನಿರ್ಧರಿಸಿದೆ.