Ad Widget .

ಉ.ಪ್ರದೇಶ ಸಿಎಂ ಯೋಗಿಯಿಂದ ಮಾರ್ಕೆಟಿಂಗ್ ಸರ್ಜಿಕಲ್ ಸ್ಟ್ರೈಕ್| ರಾಜ್ಯಾದ್ಯಂತ ಅಂಗಡಿ ಬೋರ್ಡ್ ನಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಆದೇಶ

ಸಮಗ್ರ ನ್ಯೂಸ್: ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್- ರೆಸ್ಟೋರೆಂಟ್ ಮತ್ತಿತರ ಆಹಾರದ ಅಂಗಡಿಗಳ ಮುಂದೆ ಮಾಲೀಕರ ಹೆಸರುಗಳನ್ನು ಪ್ರದರ್ಶಿಸಬೇಕೆಂಬ ಮುಜಾಫರ್​ನಗರ ಜಿಲ್ಲಾ ಪೊಲೀಸರ ವಿವಾದಾತ್ಮಕ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಇಡೀ ರಾಜ್ಯಕ್ಕೆ ವಿಸ್ತರಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಿಲ್ಲಾ ಪೊಲೀಸರು ಸೋಮವಾರ ಹೊರಡಿಸಿದ್ದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೊಂದು ‘ಮುಸ್ಲಿಂ-ವಿರೋಧಿ ಕ್ರಮ’ ಎಂದು ವಿಪಕ್ಷಗಳು ಟೀಕಿಸಿದ್ದವು. ಈ ಆದೇಶವು ಮುಸ್ಲಿಂ ವರ್ತಕರನ್ನು ಟಾರ್ಗೆಟ್ ಮಾಡಿದೆಯೆಂದು ಆಳುವ ಪಕ್ಷದ ಕೆಲವು ಮಿತ್ರ ಪಕ್ಷಗಳು ಕೂಡ ಆರೋಪಿಸಿರುವುದರಿಂದ ವಿವಾದದ ಕಾವು ಹೆಚ್ಚಾಗಿದೆ.

Ad Widget . Ad Widget . Ad Widget .

ರಾಜ್ಯಾದ್ಯಂತ ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಎಲ್ಲ ಹೊಟೇಲ್​ಗಳಿಗೆ ಈ ನಿಯಮವನ್ನು ಅನ್ವಯಿಸುವ ಔಪಚಾರಿಕ ಆದೇಶವನ್ನು ಶೀಘ್ರವೇ ಹೊರಡಿಸಲಾಗುವುದೆಂದು ರಾಜ್ಯ ಸರ್ಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ. ಯಾವುದೇ ‘ಗೊಂದಲವನ್ನು’ ನಿವಾರಿಸುವ ಉದ್ದೇಶದಿಂದ ಹೊಟೇಲ್​ಗಳ ಮಾಲೀಕರ ಹೆಸರನ್ನು ಪ್ರದರ್ಶಿಸುವಂತೆ ಮುಜಾಫರ್​ನಗರ ಪೊಲೀಸರು ಸೋಮವಾರ ಆದೇಶಿಸಿದ್ದರು.

ಕನ್ವರ್ ಯಾತ್ರೆಯ ಸುಮಾರು 240 ಕಿ.ಮೀ. ಮಾರ್ಗ ಮುಜಾಫರ್​ನಗರ ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಎಲ್ಲ ಹೋಟೆಲ್, ಧಾಬಾ ಮತ್ತು ತಳ್ಳು ಗಾಡಿಗಳ ಸಹಿತ ಎಲ್ಲ ಆಹಾರದಂಗಡಿಗಳ ಮಾಲೀಕರ ಹೆಸರನ್ನು ಪ್ರದರ್ಶಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸಸ್ ಮುಖ್ಯಸ್ಥ ಅಭಿಷೇಕ್ ಸಿಂಗ್ ಹೇಳಿದ್ದಾರೆ.

ಶುದ್ಧ ಸಸ್ಯಾಹಾರಿ ಹೋಟೆಲ್​ನಲ್ಲಿ ‘ಸಾತ್ವಿಕ’ ಆಹಾರ ಸಿಗುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹೇಳಿದೆ. ಆದರೆ, ಲೋಕ ಜನ ಶಕ್ತಿ ಮತ್ತು ಜೆಡಿಯುನಂಥ ಬಿಜೆಪಿಯ ಮಿತ್ರಪಕ್ಷಗಳು ಹಾಗೂ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್​ಪಿ, ಒವೈಸಿ ನೇತೃತ್ವದ ಎಐಎಂಐಎಂ ಮುಂತಾದ ಪ್ರತಿಪಕ್ಷಗಳು ಈ ಕ್ರಮವನ್ನು ಕಟುವಾಗಿ ವಿರೋಧಿಸಿವೆ. ಇದು ‘ಸರ್ಕಾರಿ ಪ್ರಾಯೋಜಿತ ಧರ್ವಂಧತೆ’ ಆಗಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ವರ್ಣಿಸಿದ್ದಾರೆ.

Leave a Comment

Your email address will not be published. Required fields are marked *