ಸಮಗ್ರ ನ್ಯೂಸ್:
ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡೆಂಗ್ಯೂ ಜ್ವರ ತಡೆಗೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕಿದ್ದ ಬಿಬಿಎಂಪಿ ಇದೀಗ ಜಾಗೃತಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮತ್ತು ಜಾಗೃತಿ ಮೂಡಿಸುವ ರೀಲ್ಸ್‌ಗಳನ್ನು ಮಾಡುವವರಿಗೆ ಬಿಬಿಎಂಪಿ ಈಗ ಉತ್ತಮ ಬಹುಮಾನವನ್ನು ನೀಡುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಡೆಂಗ್ಯೂ ವಿಷಯದ ಕುರಿತು ರೀಲ್ಸ್‌ಗಳನ್ನು ಆಹ್ವಾನಿಸಿರುವ ಪಾಲಿಕೆ ಮೊದಲ ಐದು ಅತ್ಯುತ್ತಮ ರೀಕ್ಷೆಗಳಿಗೆ ತಲಾ 25,000 ರೂ. ಬಹುಮಾನ, ದ್ವಿತೀಯ ಬಹುಮಾನವನ್ನು ತಲಾ 10,000 ರೂ ನಿಗದಿಪಡಿಸಲಾಗಿದೆ.
ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ರೀಲ್ಸ್‌ಗಳನ್ನು ಮಾಡಿಸುವ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ಮಕ್ಕಳಿಗಾಗಿ ಶೈಕ್ಷಣಿಕ ವೀಡಿಯೊಗಳನ್ನು ರಚಿಸಲು ಪ್ರೋತ್ಸಾಹಿಸಲು ಶಿಕ್ಷಕರಿಗೂ ಕೂಡ 35,000 ರೂ. ಬಹುಮಾನವನ್ನು ಸಹ ನೀಡಲಾಗುವುದು ಎಂದು ಆಫರ್ ಕೊಟ್ಟಿದೆ.