ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಧಾರಾಕಾರ ಸುರಿಯುತ್ತಿದೆ. ಇದರಿಂದ ಮಳೆ ಆರ್ಭಟಕ್ಕೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಅದರಂತೆ ಬೆಂಗಳೂರು ಟು ಮಂಗಳೂರು ಅಥವಾ ಮಂಗಳೂರು ಟು ಬೆಂಗಳೂರು ಮಾರ್ಗ ರಸ್ತೆಗಳು ಸಹ ಬಂದ್ ಆಗಿವೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಾದರೆ ಚಾರ್ಮಾಡಿ ಘಾಟ್, ಶಿರಾಡಿಘಾಟ್ ಮತ್ತು ಮಡಿಕೇರಿಯ ಸಂಪಾಜೆ ಘಾಟ್ ಮೂಲಕ ಹೋಗಬೇಕು. ಆದರೆ, ಇದೀಗ ಈ ಮಾರ್ಗಗಳಲ್ಲಿ ಗುಡ್ಡ ಕುಸಿಯುವ ಭೀತಿ ಇರುವುದರಿಂದ ಈ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ಭೂ ಕುಸಿತದ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ನಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಟು ಮಂಗಳೂರು ಮೂರು ಮಾರ್ಗಗಳು ಬಂದ್:
ಬೆಂಗಳೂರು ಟು ಮಂಗಳೂರಿಗೆ ಅಥವಾ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಮೂರು ಮಾರ್ಗಗಳಿವೆ. ಒಂದು ಚಾರ್ಮಾಡಿ ಘಾಟ್ ಮೂಲಕ, ಇನ್ನೊಂದು ಶಿರಾಡಿಘಾಟ್, ಮತ್ತೊಂದು ಮಡಿಕೇರಿ- ಸಂಪಾಜೆ ಘಾಟ್ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಹೋಗಬಹುದು. ಆದ್ರೆ, ಇದೀಗ ಈ ಎಲ್ಲಾ ರಸ್ತೆ ಮಾರ್ಗಗಳು ಬಂದ್ ಆಗಿವೆ. ಅಲ್ಲಲ್ಲಿ ರಸ್ತೆ ಕುಸಿಯುವ ಭೀತಿ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ಎಲ್ಲಾ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಇನ್ನು ಚಾರ್ಮಾಡಿ ಘಾಟ್ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಹೋಗಬಹುದು. ಆದ್ರೆ, ಈ ಘಾಟ್ನಲ್ಲಿ ಭಾರೀ ವಾಹನ ಸಂಚರಿಸುವಂತಿಲ್ಲ. ಇನ್ನು ಕಾರು, ಕೆಎಸ್ಆರ್ಟಿಸಿ ಬಸ್ಗಳು ಹೋಗಬಹುದು. ಆದ್ರೆ, ದೋ ಅಂತ ಮಳೆ ಸುರಿಯುತ್ತಿದ್ದರಿಂದ ಈ ರಸ್ತೆಯಲ್ಲಿ ರಾತ್ರಿ ಪ್ರಯಾಣ ಅಷ್ಟು ಸೂಕ್ತವಾಗಿಲ್ಲ. ಮೊದಲೇ ದೊಡ್ಡ ಘಾಟ್ ಆಗಿರುವುದರಿಂದ ರಸ್ತೆ ಕಿರಿದಾಗಿದೆ, ಇನ್ನೊಂದೆಡೆ ಮಳೆಯಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಗಿಡ-ಮರಗಳು ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಸದ್ಯ ಈ ಮಾರ್ಗದಲ್ಲಿ ಪ್ರಯಾಣ ಮಾಡುವುದು ಅಷ್ಟು ಸಮಂಜಸವಲ್ಲ.
ಕೊಡಗಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಮಡಿಕೇರಿ ನಗರದ ಜ. ತಿಮ್ಮಯ್ಯ ವೃತ್ತದಲ್ಲೇ ಸಂಚಾರಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಹಾಗಾಗಿ ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ತೀವ್ರ ಪರದಾಡುವಂತಾಗಿದೆ. ಕೇವಲ ಎರಡು ಗಂಟೆ ಮೊದಲು ಹೆದ್ದಾರಿ ಬಂದ್ಗೆ ಆದೇಶ ನೀಡಲಾಗಿದ್ದು, ಆದೇಶದ ಬಗ್ಗೆ ಗೊತ್ತಿಲ್ಲದೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ.
ಮಡಿಕೇರಿ-ಸಂಪಾಜೆವರೆಗಿನ 275 ಹೆದ್ದಾರಿ ನಾಲ್ಕು ದಿನ ಬಂದ್:
ರಾಷ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವೆ ತೀವ್ರ ಮಳೆಯಿಂದಾಗಿ ರಸ್ತೆ ಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕರ ಹಿತಾಸಕ್ತಿಯಿಂದ ಈ ಭಾಗದಲ್ಲಿ ಜುಲೈ 18ರಿಂದ 22ರ ವರೆಗೆ ಪ್ರತಿ ದಿನ ರಾತ್ರಿ 8 ರಿಂದ ಮರದಿನ ಬೆಳಿಗ್ಗೆ 6 ಗಂಟೆ ವರೆಗೆ ಎಲ್ಲಾ ವಾಹನಗ ಸಂಚಾರ ನಿರ್ಬಂಧಿಸಲಾಗಿದೆ.