ಸಮಗ್ರ ನ್ಯೂಸ್: ಸಮಾಜದಲ್ಲಿ ವಿಚ್ಛೇದನೆ ಎಂಬುದು ಸರ್ವಸಾಮಾನ್ಯವಾಗಿದೆ. ಹಿಂದಿನ ಕಾಲದ ರೀತಿಯಲ್ಲಿ ನೂರ್ಕಾಲ ಬದುಕುವುದು ಕನಸಿನ ಮಾತಾಗಿದ್ದು, ವಿಚ್ಛೇದನ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಇದೀಗ ವಿಚ್ಚೇದನ ಬಯಸಿ ನ್ಯಾಯಾಲಯಕ್ಕೆ ಬಂದಿದ್ದ 18 ದಂಪತಿಗಳು ಲೋಕ ಅದಾಲತ್ ನಲ್ಲಿಕೌಟುಂಬಿಕ ಕಲಹಕ್ಕೆ ತೆರೆಕಂಡ ಘಟನೆ ವರದಿಯಾಗಿದೆ.
ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿಈ ಘಟನೆ ನಡೆದಿದ್ದು ಕೌಟುಂಬಿಕ ಕಲಹದಿಂದ ಬೇಸತ್ತು ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಗಳು. ಹಲವು ವರ್ಷಗಳಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು ಕೊನೆಗೂ ಲೋಕ್ ಅದಾಲತ್ ನಲ್ಲಿ ದಂಪತಿಗಳನ್ನು ನ್ಯಾಯಾಧೀಶರು ಒಂದು ಮಾಡಿದ್ದಾರೆ.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ -13ಮಧುಗಿರಿ ನ್ಯಾಯಾಲಯದಲ್ಲಿ – 2 , ಪಾವಗಡ – 1, ತಿಪಟೂರು – 1. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ – 1 ದಂಪತಿ. ಒಟ್ಟು 18 ಜೋಡಿದಂಪತಿಗಳು ಒಂದಾಗಿದ್ದಾರೆ.
ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಮುನಿರಾಜು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ನೇತೃತ್ವದಲ್ಲಿ ಒಂದಾಗಿದ್ದಾರೆ. ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಕೂಡಾ ಹಾಜರಿದ್ದರು.