ಸಮಗ್ರ ನ್ಯೂಸ್: ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡೂದಿ ಅಪೊಸ್ಟಲ್ ದಿ ಫಸ್ಟ್ ಕಾಲ್’ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ 2019ರಲ್ಲಿ ಘೋಷಿಸಲಾಗಿದ್ದು, ಮಂಗಳವಾರ ಮಾಸ್ಕೋ ಕ್ರೆಮಿನ್ ನ ಸೇಂಟ್ ಕ್ಯಾಥರೀನ್ ಹಾಲ್ ನಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸಾಂಪ್ರದಾಯಿಕವಾಗಿ ಪ್ರದಾನ ಮಾಡಿದರು.
ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಉಭಯ ದೇಶಗಳ ನಡುವಿನ ಸ್ನೇಹಪರ ಸಂಬಂಧಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ಭಾರತದ ಪ್ರಧಾನಿಗೆ ನೀಡಲಾಯಿತು ಎಂದು ರಷ್ಯಾ ಹೇಳಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮೋದಿ, ರಷ್ಯಾದ ಅತ್ಯುನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಕ್ಕಾಗಿ ಪುಟಿನ್ ಅವರಿಗೆ ಧನ್ಯವಾದಗಳು. ಕಳೆದ 2.5 ದಶಕಗಳಲ್ಲಿ ಪುಟಿನ್ ಅವರ ನಾಯಕತ್ವದಲ್ಲಿ, ಭಾರತ- ರಷ್ಯಾ ಸಂಬಂಧಗಳು ಎಲ್ಲಾ ದಿಕ್ಕುಗಳಲ್ಲಿ ಬಲಗೊಂಡಿವೆ. ಪ್ರತಿ ಬಾರಿಯೂ ಹೊಸ ಎತ್ತರಕ್ಕೆ ಏರಿವೆ. ಎರಡು ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಸಂಬಂಧಗಳ ಅಡಿಪಾಯವು ಮತ್ತಷ್ಟು ಬಲಗೊಂಡಿದೆ. ಜನರ ನಡುವಿನ ಸಹಭಾಗಿತ್ವ ಹಾಗೂ ಪರಸ್ಪರ ಸಹಕಾರವು ಉತ್ತಮ ಭವಿಷ್ಯದ ಭರವಸೆ ನೀಡಿದೆ ಎಂದಿದ್ದಾರೆ. ಅಲ್ಲದೆ ತಾವು ಪಡೆದ ಪ್ರಶಸ್ತಿಯನ್ನು ಭಾರತದ ನಾಗರಿಕರಿಗೆ ಸಮರ್ಪಿಸುವುದಾಗಿ ಹೇಳಿದ್ದಾರೆ.