Ad Widget .

ಕೆಎಸ್ಆರ್ ಟಿಸಿಗೆ ಸೇರ್ಪಡೆಯಾಗಲಿವೆ 300 ಹೊಸ‌ ಎಲೆಕ್ಟ್ರಿಕ್ ಬಸ್| ಈಗ ಪ್ರಯಾಣ ಮತ್ತಷ್ಟು ಸುಲಭ!

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡಲಿದೆ. 225 ನಾನ್-ಎಸಿ ಹಾಗೂ 75 ಎಸಿ ಒಳಗೊಂಡಂತೆ ಒಟ್ಟು 300 ಎಲೆಕ್ಟ್ರಿಕ್ ಬಸ್‌ಗಳು ಗುತ್ತಿಗೆ ಮಾದರಿಯಲ್ಲಿ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಲಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು, ‘ಈ ಬಸ್‌ಗಳನ್ನು 12 ವರ್ಷಗಳ ಅವಧಿಗೆ ಒಪ್ಪಂದದ ಮೇರೆಗೆ (Gross Cost Contract Model) ಪಡೆಯಲು ನಿರ್ಧರಿಸಲಾಗಿದ್ದು, ಟೆಂಡರ್ ಕೂಡ ಕರೆಯಲಾಗಿದೆ’ ಎಂದು ತಿಳಿಸಿದ್ದಾರೆ.

Ad Widget . Ad Widget . Ad Widget .

ನೂತನ 300 ಎಲೆಕ್ಟ್ರಿಕ್ ಬಸ್‌ಗಳಲ್ಲಿ ನಾನ್-ಎಸಿ (ಹವಾನಿಯಂತ್ರಿತ ರಹಿತ) ಹಾಗೂ ಎಸಿ ಡಿಲಕ್ಸ್ (ಹವಾನಿಯಂತ್ರಿತ) ಬಸ್‌ಗಳು ಸೇರಿರಲಿವೆ. 12-ಮೀಟರ್‌ನ 205 ನಾನ್-ಎಸಿ ಇಂಟರ್‌ಸಿಟಿ ಬಸ್‌ಗಳು (2×3 ಆಸನ ವ್ಯವಸ್ಥೆ), 12-ಮೀಟರ್‌ನ 75 ಎಸಿ ಡಿಲಕ್ಸ್ ಇಂಟರ್‌ಸಿಟಿ ಬಸ್‌ಗಳು (2×2 ಆಸನ ವ್ಯವಸ್ಥೆ) ಮತ್ತು 12-ಮೀಟರ್‌ನ 20 ನಾನ್-ಎಸಿ ಸಿಟಿ ಬಸ್‌ಗಳು ( 2×2 ಆಸನ ವ್ಯವಸ್ಥೆ) ಇರಲಿವೆ.

ಬೆಂಗಳೂರು – ತುಮಕೂರು, ಬೆಂಗಳೂರು – ಕೋಲಾರ ಹಾಗೂ ಬೆಂಗಳೂರು – ಚಿಕ್ಕಬಳ್ಳಾಪುರದಂತಹ ಮಾರ್ಗಗಳಲ್ಲಿ ಈ ಬಸ್‌ಗಳು ಸಂಚಾರ ನಡೆಸಲಿವೆ. ತುಮಕೂರು ವಿಭಾಗಕ್ಕೆ 50, ಕೋಲಾರ 45, ಮಂಗಳೂರು 45, ಚಿಕ್ಕಬಳ್ಳಾಪುರ 40, ಪುತ್ತೂರು 40, ಮೈಸೂರು ಗ್ರಾಮಾಂತರ 30, ಮೈಸೂರು ನಗರ 20 ಮತ್ತು ರಾಮನಗರ ವಿಭಾಗಕ್ಕೆ 20 ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಚೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 30 ಸೀಟರ್-ಕಮ್-ಸ್ಲೀಪರ್ ಮತ್ತು 70 ನಾನ್-ಎಸಿ ಸ್ಲೀಪರ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಕರೆದಿತ್ತು. ನೂತನ ಸೀಟರ್-ಕಮ್-ಸ್ಲೀಪರ್ ಬಸ್‌ಗಳ ಪ್ರಾಯೋಗಿಕ ಸಂಚಾರ ಶುರುವಾದ ನಂತರ, ಸಾರಿಗೆ ಸಂಸ್ಥೆಯ ತಾಂತ್ರಿಕ ಪರಿಣಿತರ ಸಮಿತಿಯು ಒಂದು ತಿಂಗಳೊಳಗೆ ವರದಿಯನ್ನು ನೀಡಲಿದೆ. ಫಲಿತಾಂಶಗಳು ತೃಪ್ತಿಕರವಾಗಿದ್ದರೆ, ಸಾರಿಗೆ ಸಂಸ್ಥೆಯು ಮತ್ತಷ್ಟು ಬಸ್‌ಗಳನ್ನು ಖರೀದಿ ಮಾಡಲಿದೆ ಎಂದು ವರದಿಯಾಗಿತ್ತು.

Leave a Comment

Your email address will not be published. Required fields are marked *