ಸಮಗ್ರ ನ್ಯೂಸ್: ಭಾರತದಲ್ಲಿ ವಿಶ್ವದ ಮೊದಲ CNG ಬೈಕ್ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಬಜಾಜ್ CNG ಬೈಕ್ ಅನ್ನು ಬಿಡುಗಡೆ ಮಾಡಿದ ವಿಶ್ವದ ಮೊದಲ ದ್ವಿಚಕ್ರ ವಾಹನ ತಯಾರಕ ಕಂಪನಿ. ಇಡೀ ವಾಹನ ಲೋಕದ ಗಮನ ಈಗ ಈ ಕಂಪನಿಯತ್ತ ಹೊರಳುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬೈಕ್ ಅನ್ನು ಭಾರತಕ್ಕೆ ಪರಿಚಯಿಸಿದ್ದು, ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಇದರ ನಿರೀಕ್ಷೆಗಳು ಹಲವು ಪಟ್ಟು ಹೆಚ್ಚುತ್ತಿವೆ.
ಸಿಎನ್‌ಜಿ ಚಾಲಿತ ಕಾರುಗಳು ಬಂದು ದಶಕಕ್ಕೂ ಹೆಚ್ಚು ಆದರೂ, ಸಿಎನ್‌ಜಿ-ಚಾಲಿತ ಬೈಕ್ ಬರುತ್ತಿರುವುದು ಇದೀಗ ಮೊದಲ ಬಾರಿಗೆ ಮಾತ್ರ, ಭಾರತಕ್ಕೆ ಮಾತ್ರವಲ್ಲದೆ ವಿಶ್ವದಲ್ಲೇ ಇದೇ ಮೊದಲು.
ಸಿಎನ್‌ಜಿ ಬೈಕ್‌ನ ಆರಂಭಿಕ ಬೆಲೆ ಪೆಟ್ರೋಲ್ ಬೈಕ್ ಮಾದರಿಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಇದು ಎಲೆಕ್ಟ್ರಿಕ್ ಬೈಕ್ ಮಾದರಿಗಳಿಗಿಂತ ಹಲವಾರು ಪಟ್ಟು ಅಗ್ಗವಾಗಿದೆ ಎಂದು ನಿರೀಕ್ಷಿಸಲಾಗಿದೆ. ಈ ಬೈಕ್ ಅನ್ನು ನಿರ್ಮಿಸಲು ಕೊಂಚ ಹೆಚ್ಚಿನ ವೆಚ್ಚ ತಗುಲುವುದಂತೂ ಖಂಡಿತ.
ಆದರೆ, ಸಿಎನ್‌ಜಿಗೆ ಪೆಟ್ರೋಲ್‌ಗಿಂತ ಚಾಲನೆಯ ವೆಚ್ಚದಲ್ಲಿ ಕಡಿಮೆ ಅಗತ್ಯವಿರುತ್ತದೆ. ಇಂದಿನ ಬೆಲೆಯನ್ನು ನೋಡುವುದಾದರೆ, ಒಂದು ಕೆಜಿ ಸಿಎನ್‌ಜಿ ಬೆಲೆ ರೂ. 85.50 ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದೇ ವೇಳೆ ಲೀಟರ್ ಪೆಟ್ರೋಲ್ ಬೆಲೆ ರೂ. 100ಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಆದ್ದರಿಂದ ನಾವು ಪ್ರತಿದಿನ ಸಾಕಷ್ಟು ಹಣವನ್ನು ಉಳಿಸಬಹುದು. ಅಲ್ಲದೆ, ಮೈಲೇಜ್‌ಗೆ ಅನುಗುಣವಾಗಿ ನೀಡಲಿದೆ ಎನ್ನಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಮುಂಬರುವ ಬಜಾಜ್ ಸಿಎನ್ ಜಿ (Bajaj Freedom 125 CNG) ಬೈಕ್ ಪ್ರತಿ ಕೆಜಿಗೆ 90 ಕಿ.ಮೀ ನಿಂದ 100 ಕಿ.ಮೀ ಮೈಲೇಜ್ ನೀಡಲಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅದೇ ಸಮಯದಲ್ಲಿ, ಅದರ ಕಾರ್ಯಾಚರಣೆಯ ವೆಚ್ಚವು ಎಲೆಕ್ಟ್ರಿಕ್ ಬೈಕುಗಳಿಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಆದರೆ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಮುಂಗಡ ವೆಚ್ಚವನ್ನು (ಹೆಚ್ಚಿನ ಬೆಲೆ) ಹೊಂದಿರುವುದು ಅನೇಕರಿಗೆ ದುಬಾರಿ ಎನಿಸಿದೆ.
ಬಜಾಜ್‌ನ ಸಿಎನ್‌ಜಿ ಬೈಕ್ ಘೋಷಣೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸದ್ಯಕ್ಕೆ ಈ ಬೈಕ್ ಮೇಲೆ ಭಾರೀ ನಿರೀಕ್ಷೆಗಳಿವೆ. ಹೀಗಾಗಿ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ಇದರ ಮಧ್ಯೆ, ಬೈಕ್‌ನ ಬೆಲೆ, ಕಾರ್ಯಕ್ಷಮತೆ ಮತ್ತು ಮೈಲೇಜ್ ಮಾರುಕಟ್ಟೆಯಲ್ಲಿ ಬೈಕ್ ಯಶಸ್ವಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.