Ad Widget .

171 ಲಕ್ಷ ಕೋಟಿಗೆ ಏರಿದ ಕೇಂದ್ರ ಸರ್ಕಾರದ ಸಾಲ| ನಿರ್ವಹಣಾ ತ್ರೈಮಾಸಿಕ ವರದಿ ಹೇಳಿಕೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. 2023ರ ಡಿಸೆಂಬರ್‌ ಅಂತ್ಯದಿಂದ ಆರಂಭಗೊಂಡು 2024ರ ಮಾರ್ಚ್‌ ಅಂತ್ಯದ ವೇಳೆದ ವೇಳೆ ಶೇ 3.4ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ಸಾರ್ವಜನಿಕ ಸಾಲದ ನಿರ್ವಹಣಾ ತ್ರೈಮಾಸಿಕ ವರದಿಯಲ್ಲಿ (ಜನವರಿ-ಮಾರ್ಚ್‌, 2024) ಹೇಳಲಾಗಿದೆ.

Ad Widget . Ad Widget .

ಈ ಆರ್ಥಿಕ ವರ್ಷದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿನ ಕೇಂದ್ರ ಬಜೆಟ್‌ನ ವಿತ್ತೀಯ ಕೊರತೆಯು ಶೇ 3ರಷ್ಟಾಗಿದೆ. ಲೋಕಸಭೆ ಚುನಾವಣೆಯ ಕಾರಣ ನೀತಿ ಸಂಹಿತೆ ಜಾರಿಯಲ್ಲಿತ್ತು. ಈ ಕಾರಣದಿಂದಾಗಿ ಸರ್ಕಾರವು ಕಡಿಮೆ ವೆಚ್ಚ ಮಾಡಿದೆ ಎಂದು ಸಿಜಿಎ ಹೇಳಿದೆ. 2023-24ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಜೆಟ್‌ನ ವಿತ್ತೀಯ ಕೊರತೆಯು ಶೇ 11.8ರಷ್ಟಿತ್ತು.

Ad Widget . Ad Widget .

2023-24ನೇ ಸಾಲಿನಲ್ಲಿ ಬಜೆಟ್‌ನ ವಿತ್ತೀಯ ಕೊರತೆಯು ಶೇ 5.6ರಷ್ಟಿತ್ತು. ಇದು ಶೇ 5.08ರಷ್ಟಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. 2025-26ನೇ ಸಾಲಿನಲ್ಲಿ ಶೇ 4.5ರಷ್ಟು ವಿತ್ತೀಯ ಕೊರತೆಯು ಸಾಧಿಸಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

Leave a Comment

Your email address will not be published. Required fields are marked *