ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೇಸಿನಲ್ಲಿ ಅಂಧರ್ ಆಗಿದ್ದಾರೆ. ದರ್ಶನ್ ಜೊತೆಗೆ ಪವಿತ್ರಾಗೌಡ ಮತ್ತವನ ಪಟಾಲಂ ಸೇರಿ 18 ಮಂದಿಯ ಎರಡನೇ ಅವಧಿಯ ಪೊಲೀಸ್ ಅವಧಿ ಇಂದು ಅಂತ್ಯಗೊಂಡಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಮತ್ತೆ ಮುಂದಿನ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಆದೇಶಿಸಿದೆ. ಇದರ ಜೊತೆಗೆ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಮನಬಂದಂತೆ ಆವಾಜ್ ಹಾಕಿದೆ ಡಿ.ಅಭಿಮಾನಿಗಳ ಲಿಸ್ಟ್ ಪೊಲೀಸರ ಕೈ ಸೇರಿದೆ.
ದರ್ಶನ್ ಪರವಾಗಿ ಮಾತನಾಡುವ ಭರದಲ್ಲಿ ಯಾರೆಲ್ಲ ಸಾಮಾಜಿಕ ಜಾಲತಾಣದಲ್ಲಿ ಬಾಲ ಬಿಚ್ಚಿದ್ದರು, ಜೀವ ಬೆದರಿಕೆ ಹಾಕಿದ್ದರು, ಅವಾಚ್ಯವಾಗಿ ಮನ ಬಂದಂತೆ ಇತರರನ್ನು, ಕುಟುಂಬಗಳನ್ನು ನಿಂದಿಸಿ ರೌಡಿ ವರ್ತನೆ ತೋರಿದ್ದರೋ ಅವರಿಗೆ ಬುದ್ಧಿ ಕಲಿಸಲು, ಕಾನೂನಿನ ಪರಿಜ್ಞಾನವನ್ನು ಅವರಲ್ಲಿ ಮೂಡಿಸಲು ಪೊಲೀಸರು ಸಜ್ಜಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಬೆದರಿಕೆ ಹಾಕಿಸಿಕೊಂಡವರಿಂದ ಮೊಬೈಲ್ ನಂಬರ್ ಇಸಿದುಕೊಂಡಿದ್ದಾರೆ. ನಾನು ಎ ಒನ್ ಆರೋಪಿಯಾದರೂ ಪರವಾಗಿಲ್ಲ ನಿನ್ನ ಕೊಲೆ ಮಾಡುತ್ತೇನೆ ಎಂದಿದ್ದಾರೆ. ಈ ರಾಜ್ಯದ ಈ ಜಿಲ್ಲೆ ತಾಲೂಕು, ಗ್ರಾಮದವನು ಎಂದು ಅಭಿಮಾನಿಗಳು ಧಮ್ಕಿ ಹಾಕಿದ್ದಾರೆ.
ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯ ಪೊಲೀಸರು ದರ್ಶನ್ ಆಂಡ್ ಗ್ಯಾಂಗ್ ಜೈಲಿ ಬಿಡುತ್ತಿದ್ದಂತೆ ಹುಚ್ಚು ಅಭಿಮಾನಿಗಳನ್ನು ಪೊಲೀಸ್ ಭಾಷೆಯಲ್ಲಿ ವಿಚಾರಿಕೊಳ್ಳಲಾಗುತ್ತದೆ. ಇದಕ್ಕಾಗಿ ಪೊಲೀಸ್ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಜೀವ ಬೆದರಿಕೆ, ನಿಂದನೆ, ಧಮ್ಕಿ, ರೌಡಿ ವರ್ತನೆ, ಕಾನೂನು ಬಾಹಿರವಾಗಿ ನಡೆದುಕೊಂಡವರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ.