Ad Widget .

ಪುತ್ತೂರು: ಮುಳಿಯ ಜ್ಯುವೆಲ್ಸ್ ನ ವತಿಯಿಂದ ಭಾರತೀಯ ಸೇನೆಗೆ ಆಯ್ಕೆಯಾದ ಅಗ್ನಿವೀರರ ಅಭಿನಂದನಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯ ಮೂಲಕ ಯುವಕರಿಗೆ ಸೇನೆಯಲ್ಲಿ ಸೇವೆ ನೀಡುವ ಅವಕಾಶವನ್ನು ಕಲ್ಪಿಸಿದೆ. ದೇಶ ಭಕ್ತಿ ಅಂತರಾಳದಲ್ಲಿ ಇದ್ದ ಕಾರಣದಿಂದ ಅಗ್ನಿವೀರನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಎಲ್ಲರಿಗೂ ಮಾದರಿಯಾಗಿರುವ ಯುವಕ ಬೇರೆ ಯುವಕರನ್ನು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಸಾಮಥ್ಯವನ್ನು ಹೊಂದಿದ್ದಾನೆ ಎಂದು ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ ಹೇಳಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪುತ್ತೂರು ಮುಳಿಯ ಜ್ಯುವೆಲ್ಸ್ ನ ಶಾಖೆಯಲ್ಲಿ ಮುಳಿಯ ಜ್ಯುವೆಲ್ಸ್ ನ ವತಿಯಿಂದ ಭಾರತೀಯ ಸೇನೆಗೆ ಆಯ್ಕೆಯಾದ ಅಗ್ನಿವೀರರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

Ad Widget . Ad Widget . Ad Widget .

ಸನ್ಮಾನ ಸ್ವೀಕರಿಸಿದ ಅಗ್ನಿವೀರ ಭವಿಶ್ ತಾರಿಗುಡ್ಡೆ ಮಾತನಾಡಿ ಸೇನೆಯಲ್ಲಿ ದೇಶ ಸೇವೆಯನ್ನು ಮಾಡಬೇಕೆಂಬ ಕನಸು ಸಣ್ಣದರಲ್ಲೇ ಇತ್ತು. ಆರ್ಥಿಕ ಕಷ್ಟ ಇದ್ದಕಾರಣದಿಂದ ಬೆಳಗ್ಗಿನ ಜಾವ ತರಬೇತಿಯಲ್ಲಿ ಭಾಗವಹಿಸಿ, ಕಾಲೇಜು ಶಿಕ್ಷಣವನ್ನು ಪಡೆದು ರಾತ್ರಿ ಬಾರ್ ನಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದೆ. ಈಗ ಸೇನೆಯಲ್ಲಿ ಅವಕಾಶ ಸಿಕ್ಕಿದ್ದು, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಜವಾಬ್ದಾರಿ ಇದೆ ಎಂದು ತಿಳಿಸಿದರು.

ಅಗ್ನಿವೀರನಾಗಿ ಆಯ್ಕೆಯಾದ ಭವಿಶ್ ತಾರಿಗುಡ್ಡೆ ಅವರನ್ನು ಧನ ಸಹಾಯ ನೀಡಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

೩ಸಾವಿರಕ್ಕೂ ಅಧಿಕ ಗಿಡಗಳನ್ನು ವಿತರಣೆ ಮಾಡುವ ಜತೆಗೆ ಗೋವಿಹಾರ ದಾಮದಲ್ಲಿ ಗಿಡಗಳನ್ನು ಸಿಬ್ಬಂದಿಗಳಲ್ಲಿ ನೆಡಿಸುವ ಮೂಲಕ ಪರಿಸರ ಕಾಳಜಿಯನ್ನು ತೋರಿಸಿದೆ. ವಿವಿಧ ಸಾಮಾಜಿಕ ಚಟುವಣೆಯಲ್ಲಿ ಮುಂಚೂಣಿಯಲ್ಲಿರುವ ಪರಿಶುದ್ಧವಾದ ಚಿನ್ನಾಭರಣಕ್ಕೆ ಹೆಸರುವಾಸಿಯಾಗಿರುವ ಮುಳಿಯ ಜ್ಯುವೆಲ್ಸ್ ಈಗ ಅಗ್ನಿಮೀರನಾಗಿ ಆಯ್ಕೆಯಾದವರನ್ನು ಗೌರವಿಸುವ ಮೂಲಕ ಇನ್ನಷ್ಟು ಮಂದಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾಗಿದೆ.

ತಾಯಿ ವೀಣಾ, ತಂದೆ ಬಾಲಕೃಷ್ಣ, ಸಹೋದರಿ ಭವಿತಾ, ಪುತ್ತೂರು ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಪ್ಲೋರ್ ಮೆನೇಜರ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *