ಸಮಗ್ರ ನ್ಯೂಸ್: ರಾಜ್ಯದಲ್ಲಿ 30 ವರ್ಷದಿಂದ ಬಾಕಿ ಉಳಿದ 9 ರೈಲ್ವೆ ಯೋಜನೆಗಳನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಂಪರ್ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ವಿಳಂಬವಾಗಿರುವ ಸುಮಾರು 1264 ಕಿಲೋ ಮೀಟರ್ ಒಳಗೊಂಡ 9 ರೈಲ್ವೆ ಯೋಜನೆ 2025 -26ರ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.
ತುಮಕೂರು -ಕಲ್ಯಾಣದುರ್ಗ – ರಾಯದುರ್ಗ, ತುಮಕೂರು -ಚಿತ್ರದುರ್ಗ -ದಾವಣಗೆರೆ, ಗಿಣಿಗೇರಾ -ರಾಯಚೂರು, ಬಾಗಲಕೋಟ -ಕುಡಚಿ, ಗದಗ -ವಾಡಿ, ಕಡೂರು -ಚಿಕ್ಕಮಗಳೂರು, ಶಿವಮೊಗ್ಗ -ಶಿಕಾರಿಪುರ -ರಾಣೆಬೆನ್ನೂರು, ಬೆಳಗಾವಿ -ಕಿತ್ತೂರು -ಧಾರವಾಡ, ಹಾಸನ -ಬೇಲೂರು ಯೋಜನೆಗಳನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ಚುರುಕುಗೊಳಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಮುಂದಿನ 15 ದಿನಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರೈಲ್ವೆ ತಾಂತ್ರಿಕ ತಜ್ಞರ ನೇಮಕಾತಿಗೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.