Ad Widget .

ಕಾಡ್ಗಿಚ್ಚಿನಿಂದಾಗಿ ಹೊತ್ತಿ ಉರಿಯುತ್ತಿರುವ ಟರ್ಕಿ:ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಟರ್ಕಿ: ದಕ್ಷಿಣ ಕರಾವಳಿಯಲ್ಲಿ ಭುಗಿಲೆದ್ದಿರುವ ಕಾಡ್ಗಿಚ್ಚು ಸತತ ಐದನೇ ದಿನವು ಮುಂದುವರೆದಿದ್ದು, ಇದರಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿದ್ದು, 10 ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ಭಾನುವಾರ ವರದಿ ಮಾಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .


“ಮಾನವ್‌ಗತ್, ಮರ್ಮರಿಸ್ ಮತ್ತು ಮಿಲಸ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಇದರಿಂದಾಗಿ ಸುತ್ತಮುತ್ತಲಿನ ಹೋಟೆಲ್‌ಗಳು ಮತ್ತು ವಸತಿ ಪ್ರದೇಶಗಳನ್ನು ಸ್ಥಳಾಂತರಿಸಲಾಗಿದೆ” ಎಂದು ಟರ್ಕಿ ಕೃಷಿ ಮತ್ತು ಅರಣ್ಯ ಸಚಿವ ಬೇಕಿರ್ ಪಕ್ಡೆಮಿರ್ಲಿ ಹೇಳಿದ್ದಾರೆ.

Ad Widget . Ad Widget . Ad Widget .


ಬುಧವಾರದಿಂದ ನಿರಂತರ ಕಾಡ್ಗಿಚ್ಚು ಆರಂಭವಾದಾಗಿದ್ದು ಈ ಹಿನ್ನಲೆ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಭಾನುವಾರ ವರದಿಯಾದ ಎರಡು ಸಾವುಗಳಿಗೆ ಮೊದಲು, ಮಾನವ್‌ಗತ್‌ನಿಂದ ಐದು ಜನರು ಮತ್ತು ಮರ್ಮರಿಸ್‌ನ ಒಬ್ಬರು ಮೃತಪಟ್ಟಿದ್ದು ವರದಿಯಾಗಿತ್ತು.
ಕನಿಷ್ಠ ೮೨೮ ಅಗ್ನಿಶಾಮಕ ವಾಹನಗಳು, ೧೩ ವಿಮಾನಗಳು, ೪೫ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಬೆಂಕಿಯನ್ನು ನಿಯಂತ್ರಿಸಲು ಹೋರಾಡುತ್ತಿದೆ ಎಂದು ಪಕ್ಡೆಮಿರ್ಲಿ ಹೇಳಿದ್ದಾರೆ. ಹೆಚ್ಚುವರಿಯಾಗಿ, ನೆರೆಯ ರಾಷ್ಟ್ರಗಳಾದ ರಷ್ಯಾ, ಉಕ್ರೇನ್, ಇರಾನ್ ಮತ್ತು ಅಝರ್‌ಬೈಜಾನ್ ಅಗ್ನಿಶಾಮಕ ತಂಡಗಳನ್ನು ಕಳುಹಿಸಿದೆ. ಇದರ ಜೊತೆಗೆ ಸ್ಥಳೀಯರು ಸಹ ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಮೂರು ಅಗ್ನಿಶಾಮಕ ವಿಮಾನಗಳನ್ನು ಯುರೋಪಿಯನ್ ಯೂನಿಯನ್ (ಇಯು) ಸಜ್ಜುಗೊಳಿಸಿದೆ.


ಟರ್ಕಿ ಸರ್ಕಾರವು ಬೆಂಕಿಯಿಂದ ಉಂಟಾಗುವ ಎಲ್ಲಾ ನಷ್ಟವನ್ನು ಭರಿಸಲಾಗುವುದು ಮತ್ತು ಹಾನಿಗೊಳಗಾದ ಮನೆಗಳನ್ನು ಪುನರ್ನಿರ್ಮಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದೆ.
ಈ ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದಾಗಿ ಹಾನಿಗೊಳಗಾದ ಅನೇಕ ಮೆಡಿಟರೇನಿಯನ್ ದೇಶಗಳಲ್ಲಿ ಟರ್ಕಿ ಕೂಡ ಒಂದಾಗಿದೆ. ಈ ಹಿಂದೆ ಗ್ರೀಸ್, ಲೆಬನಾನ್, ಸಿರಿಯಾ, ಇಟಲಿ ಮತ್ತು ಸೈಪ್ರಸ್ ದೇಶಗಳಲ್ಲೂ ಕಾಡ್ಗಿಚ್ಚು ಸಂಭವಿಸಿತ್ತು. ಬೆಂಕಿಯಿಂದಾಗಿ ಗ್ರೀಸ್‌ನ ವಾತಾವರಣದಲ್ಲಿ ಉಷ್ಣತೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *