ಸಮಗ್ರ ನ್ಯೂಸ್: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೋಮವಾರದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಅನ್ನು 3% ರಿಂದ 5% ಗೆ ಹೆಚ್ಚಿಸಿದ್ದು, ದೇಶದಾದ್ಯಂತ ರಾಷ್ಟ್ರೀಯ ರಸ್ತೆಗಳು ಮತ್ತು ಎಕ್ಸ್‍ಪ್ರೆಸ್‍ವೇಗಳಲ್ಲಿ ಇಂದಿನಿಂದ ಟೋಲ್ ದರಗಳು ಹೆಚ್ಚಾಗಲಿವೆ.
18ನೇ ಲೋಕಸಭೆ ಚುನಾವಣೆಯಲ್ಲಿ ಮತದಾನ ಮುಗಿದ ಒಂದು ದಿನದ ನಂತರ ಟೋಲ್ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ. ಈ ದರವು ಪ್ರತಿ ವರ್ಷ ಏಪ್ರಿಲ್ 1 ರಿಂದ ಅನ್ವಯಿಸುತ್ತದೆ. ಆದರೆ, ಚುನಾವಣೆಯ ಕಾರಣ ಬಳಕೆ ಶುಲ್ಕವನ್ನು ತಡೆಹಿಡಿಯಲಾಗಿತ್ತು.
ಇಂದಿನಿಂದ ಸುಮಾರು 1,100 ಟೋಲ್ ಪ್ಲಾಜಾಗಳಲ್ಲಿ ಟೋಲ್ ಗಳನ್ನು ಹೆಚ್ಚಿಸಲಾಗುವುದು. ಹಣದುಬ್ಬರ ಸೇರಿದಂತೆ ಇತರ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ವಾರ್ಷಿಕವಾಗಿ ದರಗಳನ್ನು ಪರಿಷ್ಕರಿಸಲಾಗುತ್ತದೆ.
ರಾಷ್ಟ್ರೀಯ ಹೆದ್ದಾರಿಗಳ ಟೋಲ್ ನಿಯಮಾವಳಿ 2008 ರ ಪ್ರಕಾರ ಪ್ರತಿ ವರ್ಷ ಟೋಲ್ ದರಗಳನ್ನು ಪರಿಶೀಲಿಸಲಾಗುತ್ತದೆ.