ಸಮಗ್ರ ನ್ಯೂಸ್: ಅಬಕಾರಿ ಹಗರಣದಲ್ಲಿ ಬಂಧಿತರಾದ ಬಳಿಕ ಲೋಕಸಭೆ ಚುನಾವಣೆ ಕಾರಣ ಜಾಮೀನು ಪಡೆದಿದ್ದ ಆಪ್ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ತಿಹಾರ್ ಜೈಲಿಗೆ ಮರಳಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿ, ಜೂ.2ರಂದು ಜೈಲಿಗೆ ಮರಳಬೇಕು ಎಂದು ಕೇಜ್ರಿವಾಲ್‍ಗೆ ತಾಕೀತು ಮಾಡಿತ್ತು. ಈ ನಡುವೆ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ವಿಸ್ತರಣೆ ಕೋರಿದ್ದ ಅರ್ಜಿಯ ತೀರ್ಪು ಜೂ.5ಕ್ಕೆ ಮುಂದೂಡಿಕೆ ಆದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಭಾನುವಾರ ಜೈಲಿಗೆ ಮರಳಿದ್ದಾರೆ.
ಜೈಲಿಗೆ ಮರಳುವ ಮುನ್ನ ಕೇಜ್ರಿವಾಲ್, ತಂದೆ-ತಾಯಿಯ ಆಶೀರ್ವಾದ ಪಡೆದರು. ಬಳಿಕ ಪತ್ನಿ ಸುನಿತಾ, ದೆಹಲಿ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೇರಿದಂತೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆಗೂಡಿ ರಾಜಘಾಟ್‍ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ನಂತರ ಕನ್ನಾಟ್‍ನಲ್ಲಿರುವ ಹನುಮಂತನ ದೇಗುಲಕ್ಕೂ ಭೇಟಿ ನೀಡಿದರು.