ಸಮಗ್ರ ನ್ಯೂಸ್: ತುಂಬು ಗರ್ಭಿಣಿಯೊಬ್ಬರು ತ್ರಿಶೂರ್ನಿಂದ ಕೋಳಿಕ್ಕೋಡ್ಗೆ ಬಸ್ನಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಬಸ್ ಚಾಲಕ ಬಸ್ಸನ್ನೇ ಆಸ್ಪತ್ರೆಯತ್ತ ತಂದು ನಿಲ್ಲಿಸಿ ಮಾನವೀಯತೆ ಮೆರೆದಿದ್ದಾನೆ. ಆ ಮುನ್ನವೇ ಮಹಿಳೆ ಬಸ್ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ಬಸ್ ಪೆರಮಂಗಲಂ ಪ್ರದೇಶವನ್ನು ದಾಟಿದಂತೆ 37 ವರ್ಷದ ಗರ್ಭಿಣಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ತಿಳಿದಂತೆ ಬಸ್ ಚಾಲಕ ಬಸ್ ಅನ್ನು ತ್ರಿಶೂರು ಕಡೆಗೆ ತಿರುಗಿಸಿದ್ದಾರೆ. ಅಲ್ಲಿನ ಅಮಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಬಸ್ ಆಸ್ಪತ್ರೆಯನ್ನು ತಲುಪುವ ಮೊದಲೇ ಸಿಬ್ಬಂದಿಗಳು ಮತ್ತು ವೈದ್ಯರು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆದರೆ ಬಸ್ ಆಸ್ಪತ್ರೆ ಬಳಿ ಬಂದಂತೆ ಮಹಿಳೆ ವೈದ್ಯರ ಸಹಾಯದಲ್ಲಿ ಬಸ್ನಲ್ಲೇ ಹೆರಿಗೆಯಾಗಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಅವರ ನವಜಾತ ಶಿಶುವನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮಲಾ ಆಸ್ಪತ್ರೆಯ ಬಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಸಕಾಲಿಕ ನೆರವಿನಿಂದ ಅವರು ಬಸ್‌ನೊಳಗೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.