ಸಮಗ್ರ ನ್ಯೂಸ್: ನೈಋತ್ಯ ಮುಂಗಾರು ಮಾರುತಗಳು ಮೇ.30 ರಂದು ಕೇರಳವನ್ನು ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಭುವನೇಶ್ವರ ಕೇಂದ್ರವು ಪ್ರಕಟಿಸಿದೆ.
ರವಿವಾರ ಪಶ್ಚಿಯ ಬಂಗಾಳ ಹಾಗೂ ಬಾಂಗ್ಲಾದೇಶದ ಮೂಲಕ ಅಪ್ಪಳಿಸಿದ್ದ ಚಂಡಮಾರುತವು ಮಾನ್ಸೂನ್ ಮಾರುತವನ್ನು ಬಂಗಾಳ ಕೊಲ್ಲಿಗೆ ನೂಕಿರುವುದು ಮುಂಚಿತವಾಗಿಯೇ ಈಶಾನ್ಯ ಭಾರತವನ್ನು ಮಾನ್ಸೂನ್ ಆವರಿಸಿಕೊಳ್ಳಲು ಕಾರಣವಿರಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಭಾರತೀಯ ಹವಾಮಾನ ಇಲಾಖೆಯು, “ನೈಋತ್ಯ ಮಾನ್ಸೂನ್ ಮಾರುತಗಳು ಕೇರಳವನ್ನು ಪ್ರವೇಶಿಸಿದ್ದು, ಇಂದು (ಮೇ 30, 2024) ಈಶಾನ್ಯ ಭಾರತದ ಬಹುತೇಕ ಭಾಗಗಳತ್ತ ಚಲಿಸಲಿವೆ” ಎಂದು ಹೇಳಿದೆ.
ಇದಕ್ಕೂ ಮುನ್ನ, ಮೇ 31ರಂದು ನೈಋತ್ಯ ಮಾನ್ಸೂನ್ ಮಾರುತಗಳು ಕೇರಳವನ್ನು ಪ್ರವೇಶಿಸಲಿವೆ ಎಂದು ಮೇ.15ರಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು.