Ad Widget .

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಪ್ರಕರಣ| ಅವರವರ ಪ್ರಕಾರ ಎಲ್ಲರೂ ಅಮಾಯಕರೇ, ಯಾರನ್ನೂ ಬಿಡೋ‌ ಮಾತೇ ಇಲ್ಲ – ಎಸ್ಪಿ

ಸಮಗ್ರ ನ್ಯೂಸ್: ಶಾಸಕ ಹರೀಶ್‌ ಪೂಂಜ ಅವರ ಬಂಧನ ಹೈಡ್ರಾಮಾದಲ್ಲಿ ಪೊಲೀಸರು ಅನಗತ್ಯವಾಗಿ ಮನೆಗೆ ನುಗ್ಗಿದ್ದಾರೆ ಎಂಬ ಆರೋಪಕ್ಕೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕ ರಿಷ್ಯಂತ್‌ ಸಿ.ಬಿ. ಮಾಧ್ಯಮಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪೂಂಜ ಅವರ ಮನೆಗೆ ಆರಂಭದಲ್ಲಿ ನೋಟಿಸ್‌ ನೀಡುವ ಸಲುವಾಗಿ ಮೂವರು ತೆರಳಿದ್ದರು. ಆದರೆ ಅಲ್ಲಿ ಅವರು ಠಾಣೆಗೆ ಬಾರದೆ ಜನ ಸೇರಿಸಿ ದ್ದರಿಂದ ಭದ್ರತೆಗಾಗಿ ಹೆಚ್ಚುವರಿ ತಂಡ ಕಳುಹಿಸಬೇಕಾಯಿತು. ಬಳಿಕ ಅಲ್ಲಿನ ರಸ್ತೆ ಕಿರಿದಾಗಿದ್ದರಿಂದ ನೀವು ತೆರಳಿದರೆ ಅಲ್ಲಿ ಜನ ಕ್ಲಿಯರ್‌ ಆಗುತ್ತದೆ ಮುಂದೆ ನಾವು ಠಾಣೆಗೆ ಹಾಜರಾಗುವುದಾಗಿ ತಿಳಿಸಿದ್ದರಿಂದ ನಾವು ಬಂದಿದ್ದೇವೆ. ಬೇರೇನೂ ಇಲ್ಲ. ಕಾನೂನು ಎಲ್ಲ ರಿಗೂ ಒಂದೇ ಅಲ್ಲಿ 500 ಮಂದಿ ಸೇರಿಸಿ ದರೂ ಅಥವಾ 1 ಲಕ್ಷ ಮಂದಿ ಸೇರಿದರೂ ಒಂದೇ ಎಂದರು.

Ad Widget . Ad Widget . Ad Widget .

ಶಾಸಕರು ಕಾನೂನಿಗೆ ತಲೆಬಾಗಲೇ ಬೇಕು. ನೋಟಿಸ್‌ ನೀಡಿದ್ದೇವೆ, ಸಮಯ ಕೇಳಿದ್ದಾರೆ, ಉಳಿದಂತೆ ಅವರಿಗೆ ಬಿಟ್ಟ ವಿಚಾರ ಎಂದರು. ಬೆಳ್ತಂಗಡಿ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸ್ಥಳದಲ್ಲಿ ಕೆಲಸಗಾರರು ಹೇಳಿದಂತೆ ಸಂಬಂಧಪಟ್ಟ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಅಮಾಯಕರು ಎನ್ನುವುದು ತಪ್ಪು, ಅವರವರ ಪ್ರಕಾರ ಎಲ್ಲರೂ ಅಮಾಯಕರೇ, ಹಾಗಾಗುವುದಿಲ್ಲ, ನ್ಯಾಯಾಲಯಕ್ಕೆ ಬೇಕಾಗಿರುವುದು ಸಾಕ್ಷಿ, ಅದಕ್ಕೆ ಬೇಕಾದ ಸಾಕ್ಷಿ ನೀಡುತ್ತೇವೆ. ಅಲ್ಲಿ ಒಂದು ಖಾಸಗಿ ಸ್ಥಳವಿದ್ದು, ಮತ್ತೊಂದು ವರ್ಗ ಸ್ಥಳ, ತಹಶೀಲ್ದಾರ್‌ ಪರಿಶೀಲಿಸಿ ವರದಿ ನೀಡಿದ್ದಾರೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

Leave a Comment

Your email address will not be published. Required fields are marked *