ಸಮಗ್ರ ನ್ಯೂಸ್: ಮೇ 26ರಿಂದ ಜೂನ್ 03ರವರೆಗೆ ಕರ್ನಾಟಕದ ರೆಮಲ್ ಚೆಂಡಮಾರುತದ ಪ್ರಭಾದಿಂದ ಭಾರೀ ಮಳೆ ಆಗಲಿದೆ. ಈ ವೇಳೆ ಆಗಾಗ ಮಳೆ ಇಳಿಕೆ ಆಗುವ, ಇಲ್ಲವೇ ದಿನ ಬಿಟ್ಟು ದಿನ ಮಳೆ ಆಗುವ ಸಾಧ್ಯತೆ ಇರುತ್ತದೆ. ಮೊದಲು ದಕ್ಷಿಣ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ, ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ನಿರೀಕ್ಷಿಸಬಹುದಾಗಿದೆ.
ಉಳಿದಂತೆ ಮಲೆನಾಡು ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಬಹುದು. ಕೆಲವೆಡೆ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬರುತ್ತದೆ. ಆದರೆ ಈ ವಾರ ನಿಂತರ ಮಳೆ ಆಗುವುದು ಸಾಧ್ಯತೆ ತುಸು ಕಡಿಮೆ.
ಜೂನ್ 03ರಿಂದ ಜೂನ್ 11ರವರೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅಧಿಕ ಮಳೆ ಆಗಬಹುದು. ಅಷ್ಟೊತ್ತಿಗಾಗಲೇ ಕರ್ನಾಟಕ ಸೇರಿದಂತೆ ದೇಶದಲ್ಲಿ ಮುಂಗಾರು ಮಳೆ ಸಕ್ರಿಯವಾಗಿರುತ್ತದೆ. ಜೊತೆಗೆ ಚಂಡಮಾರುತದ ಹಾವಳಿ ತಗ್ಗದಿದ್ದರೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯನ್ನು ನಿರೀಕ್ಷಿಸಬಹುದಾಗಿದೆ.