ಸಮಗ್ರ ನ್ಯೂಸ್: ಸಮರ್ಥ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಲ್ 2024ರ ಆವೃತ್ತಿಯ (IPL 2024) ಟ್ರೋಫಿ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ.
ಈ ಹಿಂದೆ 2012 ಹಾಗೂ 2104ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಇದೀಗ ಅವರದ್ದೇ ಕೋಚಿಂಗ್ನಲ್ಲಿ ತಂಡ ಟ್ರೋಫಿ ಗೆದ್ದಿರುವುದು ವಿಶೇಷ ಎನಿಸಿದೆ. ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಬಳಿಕ (ಐದು ಬಾರಿ ಚಾಂಪಿಯನ್ ಪಟ್ಟ) ಕೆಕೆಆರ್ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ 18.3 ಓವರ್‌ಗಳಲ್ಲಿ 114 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಕೆಕೆಆರ್ ತಂಡ 10.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (52) ರನ್ ಬಾರಿಸಿ ಗೆಲುವಿಗೆ ಕೊಡುಗೆ ಕೊಟ್ಟರು.ಆರಂಭಿಕ ಬ್ಯಾಟರ್ ರಹ್ಮನುಲ್ಲಾ ಗುರ್ಬಜ್ 39 ರನ್ ಬಾರಿಸಿದರು.
ಐಪಿಎಲ್‌ನ ಅತ್ಯಂತ ದೊಡ್ಡ ಮೊತ್ತ (287 ರನ್) ಗಳಿಸಿದ ದಾಖಲೆಯನ್ನೂ ಈ ಟೂರ್ನಿಯಲ್ಲಿ ಸನ್‌ರೈಸರ್ಸ್ ಮಾಡಿತ್ತು. ನಾಲ್ಕು ಬಾರಿ 250ಕ್ಕೂ ಹೆಚ್ಚಿನ ರನ್‌ಗಳ ಮೊತ್ತವನ್ನೂ ಗಳಿಸಿತ್ತು. ಆದರೆ ಈ ಪಂದ್ಯದಲ್ಲಿ 18.3 ಓವರ್‌ಗಳಲ್ಲಿ 113 ರನ್ ಗಳಿಸಿತು. ಟೂರ್ನಿಯಲ್ಲಿಯೇ ತಂಡವೊಂದು ಗಳಿಸಿದ ಎರಡನೇ ಅತಿ ಕಡಿಮೆ ಮೊತ್ತ ಇದಾಯಿತು. ಸನ್‌ರೈಸರ್ಸ್ ಇನಿಂಗ್ಸ್‌ನಲ್ಲಿ ಕೇವಲ 3 ಸಿಕ್ಸರ್‌ಗಳು ದಾಖಲಾದವು.