ಸಮಗ್ರ ನ್ಯೂಸ್: ಭಕ್ತರು ತುಂಬಿದ್ದ ಬಸ್ ಮೇಲೆ ಡಂಪರ್ ಪಲ್ಟಿಯಾಗಿ 11 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದೆ.
ಮೇ.25 ರ ತಡರಾತ್ರಿ 11 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೀತಾಪುರದಿಂದ ಪೂರ್ಣಗಿರಿಗೆ ತೆರಳುತ್ತಿದ್ದ ಭಕ್ತರು ತುಂಬಿದ್ದ ಬಸ್‌ಗೆ ಡಂಪರ್ ಡಿಕ್ಕಿ ಹೊಡೆದಿದೆ.
ಇದಾದ ಬಳಿಕ ಬಸ್ ಮೇಲೆ ಡಂಪರ್ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 10 ಮಂದಿ ಗಾಯಗೊಂಡಿದ್ದಾರೆ.
ಮೃತರೆಲ್ಲರೂ ಸೀತಾಪುರ ಜಿಲ್ಲೆಯ ನಿವಾಸಿಗಳಾಗಿದ್ದು, ಪೂರ್ಣಗಿರಿ ಮಾತೆಯ ದರ್ಶನಕ್ಕೆ ತೆರಳುತ್ತಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಶಹಜಹಾನ್‌ಪುರದ ಖುತಾರ್ ಪ್ರದೇಶದ ಗೋಲಾ-ಲಖಿಂಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಬ್ಯಾಲೆಸ್ಟ್ ತುಂಬಿದ ಡಂಪರ್ ಖಾಸಗಿ ಬಸ್ ಮೇಲೆ ಉರುಳಿದೆ. ಇದರಿಂದ ಬಸ್‌ನಲ್ಲಿ ಕುಳಿತಿದ್ದವರು ಸಮಾಧಿಯಾದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಸೀತಾಪುರದ ಸಿಂಧೌಲಿ ಪ್ರದೇಶದ ಬಡಾ ಜಾಥಾ ಪೊಲೀಸ್ ಠಾಣೆ ಕಮಲಾಪುರ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಇವರೆಲ್ಲರೂ ಪೂರ್ಣಗಿರಿ ಮಾತೆಯ ದರ್ಶನಕ್ಕೆ ಖಾಸಗಿ ವಾಹನದಲ್ಲಿ ತೆರಳುತ್ತಿದ್ದರು. ಬಸ್ಸಿನಲ್ಲಿ ಸುಮಾರು 70 ಪ್ರಯಾಣಿಕರಿದ್ದರು. ಈ ಜನರು ರಾತ್ರಿ ಢಾಬಾ ಬಳಿ ಆಹಾರ ಸೇವಿಸಲು ಬಂದಿದ್ದರು. ಕೆಲವು ಪ್ರಯಾಣಿಕರು ಧಾಬಾದಲ್ಲಿದ್ದರು, ಕೆಲವರು ಬಸ್ ನಲ್ಲಿಯೇ ಕುಳಿತುಕೊಂಡರು. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಬ್ಯಾಲೆಸ್ಟ್ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ಬಸ್ ಮೇಲೆ ಪಲ್ಟಿಯಾಗಿದೆ. ಪಲ್ಟಿಯಾಗುವ ಮುನ್ನ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಬಸ್‌ನಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಪ್ರಯಾಣಿಸುತ್ತಿದ್ದರು ಎಂದು ಎಸ್.ಪಿ. ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ.