ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸೋಮವಾರಪೇಟೆ ನಗರದಲ್ಲಿ ಅನಾಥ ಬುದ್ಧಿಮಾಂದ್ಯ ಹುಡುಗ ರಸ್ತೆ ಉದ್ದಕ್ಕೂ ಸುತ್ತುತ್ತಿರುವುದನ್ನು ಗಮನಿಸಿದ ಸಾರ್ವಜನಿಕ ಸೋಮವಾರಪೇಟೆ ವೃತ್ತ ನಿರೀಕ್ಷಕರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿಗಳು ಬಂದು ಈ ಹುಡುಗನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಈ ಹುಡುಗ ಬುದ್ದಿಮಾಂದ್ಯ ಹುಡುಗ ಎಂದು ಗೊತ್ತಾಗಿದ್ದು, ಈ ಹುಡುಗನ ಹೆಸರು ಹೇಮಂತ್ ಇವರ ತಂದೆ ಹೆಸರು ಕೇಳಿದರೆ ಬೆಂಗಳೂರಿನ ಲಗ್ಗೆರೆ ನಿವಾಸಿಯಾದ ವೆಂಕಟಪ್ಪ ಹಾಗೂ ಇವರ ತಾಯಿಯ ಹೆಸರು ಪವಿ ಎಂದು ಹೇಳುತ್ತಿದ್ದಾರೆ.
ಅನಾಥ ಬುದ್ಧಿಮಾಂದ್ಯ ಹುಡುಗನನ್ನು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಾಗೂ ಪೊಲೀಸ್ ವೃತ ನಿರೀಕ್ಷಕರ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಹಾಗೂ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಅಸೋಸಿಯನ್ ರವರ ಸಹಕಾರದೊಂದಿಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾರವರು ಖುದ್ದಾಗಿ ಹೋಗಿ ಮಡಿಕೇರಿಯ ಶಕ್ತಿ ಅನಾಥಾಶ್ರಮಕ್ಕೆ ಸೇರಿಸಲಾಯಿತು. ಈ ಹುಡುಗನ ಮನೆಯವರು ಯಾರೇ ಆದರೂ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾವರನ್ನು(9686095831) ಬೇಟಿ ಮಾಡಿ ಹುಡುಗನನ್ನು ಕರೆದುಕೊಂಡು ಹೋಗುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ವೃತ್ತ ನಿರೀಕ್ಷಕರಾದ ಪ್ರಹ್ಲಾದ್ ರವರು ಹಾಗೂ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಅಸೋಸಿಯಲ್ ಕಾರ್ಯದರ್ಶಿಗಳಾದ ಭರತ್ ಮಾದಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.