ಉ.ಪ್ರದೇಶ: ಸ್ವಾತಂತ್ರ್ಯ ದಿನಾಚರಣೆಗಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನಾಟಕ ಅಭ್ಯಾಸದ ವೇಳೆ ಬಾಲಕನೊಬ್ಬ ನೇಣಿನ ಕುಣಿಕೆ ಬಿದ್ದು ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.
ಬದೌನ್ ಜಿಲ್ಲೆಯ ಬಾಬತ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಭಗತ್ ಸಿಂಗ್ ಅವರನ್ನು ಗಲ್ಲಿಗೆ ಹಾಕುವ ದೃಶ್ಯದ ಅಭ್ಯಾಸದ ವೇಳೆ ನೇಣು ಕುಣಿಕೆ ಹಾಕಿದಾಗ ಆಕಸ್ಮಿಕವಾಗಿ ಸ್ಟೂಲ್ ನಿಂದ ಬಾಲಕ ಬಿದ್ದಿದ್ದಾನೆ. ಮೃತ ಬಾಲಕ ಶಿವಂ ಎಂದು ಗುರುತಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅವರ ನಾಟಕ ಮಾಡಲು ಸ್ನೇಹಿತರು ನಿರ್ಧರಿಸಿದ್ದರು. ಶಿವಂ ಭಗತ್ ಸಿಂಗ್ ಪಾತ್ರ ಮಾಡುವುದಾಗಿ ತಿಳಿಸಿದ್ದ. ಮನೆಗೆ ಬಂದು ನಾಟಕ ಅಭ್ಯಾಸ ಮಾಡುತ್ತಿದ್ದರು.
ಶಿವಂ ಮೂಗಿನ ಬಳಿ ಹಗ್ಗ ಹಾಕಿಕೊಂಡು ಕುತ್ತಿಗೆ ಸುತ್ತಿದ್ದ.
ಆದರೆ ಸ್ಟೂಲ್ ಬಿದ್ದಿದ್ದರಿಂದ ಜಾರಿ ಬಿದ್ದಿದ್ದ. ಆದರೆ ಸ್ನೇಹಿತರು ಈತ ನಾಟಕ ಮಾಡುತ್ತಿದ್ದಾನೆ ಎಂದು ಸುಮ್ಮನೆ ನೋಡುತ್ತಿದ್ದರು. ಈ ವೇಳೆ ಉಸಿರಾಡಲು ಶಿವಂ ಒದ್ದಾಡುತ್ತಿದ್ದು, ದೇಹ ಚಲನೆ ನಿಲ್ಲಿಸಿದ್ದರಿಂದ ಹುಡುಗರು ಗಾಬರಿಯಾಗಿ ನೋಡಿದಾಗ ಜೀವ ಹೋಗಿತ್ತು ಎನ್ನಲಾಗಿದೆ.