ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಗೆ ದೇಶಾದ್ಯಂತ 4 ಹಂತದ ಮತದಾನ ಮುಕ್ತಾಯವಾಗಿದೆ. ಕರ್ನಾಟಕ ಸೇರಿದಂತೆ 380 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಈ ನಾಲ್ಕು ಹಂತದ ಮತದಾನ ಮುಗಿಯುತ್ತಿದ್ದಂತೆ ಯಾರು ಎಷ್ಟು ಕ್ಷೇತ್ರ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದರು.
ಅವರು ದೇಶದಾದ್ಯಂತ ನಾಲ್ಕು ಹಂತದಲ್ಲಿ ಮತದಾನ ಮುಗಿದಿದೆ. ಇನ್ನೂ ಬಾಕಿ ಉಳಿದಿರುವ 3 ಹಂತಗಳಲ್ಲಿ 163 ಕ್ಷೇತ್ರಗಳ ಮತದಾನ ನಡೆಯಬೇಕು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಬಿಜೆಪಿ ಈಗಾಗಲೇ ಸರಳ ಬಹುಮತದ ನಂಬರ್ ದಾಟಿದೆ.
ಈಗ ಅತಿ ಹೆಚ್ಚು ಕ್ಷೇತ್ರಗಳಿರುವ ರಾಜ್ಯಗಳಾದ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿಯಲ್ಲಿ ಮತದಾನ ಬಾಕಿ ಇದೆ. ನಾವು ವಾಸ್ತವವಾಗಿ ಟಾರ್ಗೆಟ್ ಇಟ್ಟುಕೊಂಡಿರುವ ಬಿಜೆಪಿಗೆ 370 ಸೀಟು, ಎನ್ಡಿಎಗೆ 400 ಸೀಟು ಖಂಡಿತ ತಲುಪುತ್ತೇವೆ. ನೂರಕ್ಕೆ ನೂರರಷ್ಟು ನಮ್ಮ ಗುರಿ ತಲುಪುತ್ತೇವೆ ಎಂದಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ಬಿಜೆಪಿ ಈ ಬಾರಿ 140 ಕ್ಷೇತ್ರಗಳಲ್ಲೂ ಗೆಲ್ಲಲ್ಲ ಎಂದಿದ್ದಾರೆ. 370 ಲೋಕಸಭಾ ಕ್ಷೇತ್ರದಲ್ಲಿ 295 ರಿಂದ 305 ಕ್ಷೇತ್ರಗಳಲ್ಲಿ ಇಂಡಿಯಾ ಗೆಲ್ಲುತ್ತೆ ಎಂದ ಟಿಎಂಸಿ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.