ಸಮಗ್ರ ನ್ಯೂಸ್ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದು ಚಿಕ್ಕ ಮಳೆ ಬಂದರೆ ಸಾಕು ಕೆಲವೊಂದು ಭಾಗಗಳಲ್ಲಿ ಕರೆಂಟ್ ಇಲ್ಲದೆ, ಕತ್ತಲಲ್ಲಿ ಜೀವನ ನಡೆಸುವಂತಾಗಿದೆ. ಹೀಗೆ ಸಾರ್ವಜನಿಕರು ಕರೆಂಟ್ ಇಲ್ಲದೆ ಆಕ್ರೋಶಗೊಂಡು ಕಾರವಾರ ರೋಡ್ ಬಂದ್ ಮಾಡಿ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಕಾರವಾರ ರೋಡ್, ಗೋಕುಲ ಧಾಮ, ಪಂಜಾರ ಪೋಳ, ತಿಮ್ಮಸಾಗರ ರೋಡ್, ಹೀಗೆ ಸೇರಿದಂತೆ ಹಳೇ ಹುಬ್ಬಳ್ಳಿಯ ಕೆಲವೊಂದು ಭಾಗಗಳಲ್ಲಿ ಸುಮಾರು ಐದಾರು ದಿನಗಳಿಂದ ಕರೆಂಟ್ ಇಲ್ಲದೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಪವರ್ ಇಲ್ಲದೆ ಕಾರಣ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಮನೆಯಲ್ಲಿ ಚಿಕ್ಕ ಮಕ್ಕಳು ಮಲಗಲು ಆಗುತ್ತಿಲ್ಲ, ಈ ಕಾರವಾರ ರಸ್ತೆಯಲ್ಲಿ ಕಂಪನಿಗಳು, ಪೆಟ್ರೋಲ್ ಬಂಕ್ಗಳಿವೆ ಹೀಗೆ ಐದಾರು ದಿನಗಳಿಂದ ವಿದ್ಯುತ್ ಕಟ್ ಆಗಿದ್ದರಿಂದ ಯಾವುದೇ ರೀತಿಯ ವ್ಯಾಪಾರ ಕೂಡ ನಡೆಯುತ್ತಿಲ್ಲ.
ಈ ಸಮಸ್ಯೆ ಬಗ್ಗೆ ಹೇಳಲು ಸಾರ್ವಜನಿಕರು ಹೋದರೆ ಕೆಇಬಿ ಅಧಿಕಾರಿಗಳ ಕ್ಯಾರೆ ಎನ್ನುತ್ತಿಲ್ಲ. ಇಂದು ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು ಸೇರಿಕೊಂಡು ರಸ್ತೆ ಬಂದ್ ಮಾಡಿ ವಿದ್ಯುತ್ ಸರಬರಾಜು ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.