Ad Widget .

ಮತಾಂತರಗೊಂಡಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ನತ್ತ ಹೊರಟ ಯುವಕ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದೆಹಲಿ: ಇಲ್ಲಿನ ಇಸ್ಲಾಮಿಕ್ ಪ್ರಚಾರಕರಿಂದ ಮತಾಂತರಗೊಂಡ ನೂರಾರು ಮಂದಿಯ ಪಟ್ಟಿಯಲ್ಲಿ ಯುವಕನ ಹೆಸರಿರುವುದನ್ನು ಕಂಡು ಆತ ಕಾಲ್ನಡಿಗೆಯಲ್ಲೇ ದೆಹಲಿಗೆ ಹೊರಟು ಸುಪ್ರೀಂ ಕೋರ್ಟ್ ಮುಂದೆ ತಾವು ಮತಾಂತರಗೊಂಡಿಲ್ಲ ಎಂದು ಸಾಬೀತು ಪಡಿಸಲು ಮುಂದಾಗಿದ್ದಾರೆ.
ಉತ್ತರ ಪ್ರದೇಶದ ಸಹರಾನ್ಪುರದ ಪ್ರವೀಣ್ ಕುಮಾರ್ ಕಾಲ್ನಡಿಗೆಯಲ್ಲೇ ಹೊರಟ ಯುವಕ. ಪಿಎಚ್‌ಡಿ ಪದವೀಧರರಾದ ಇವರು ಕಳೆದ ತಿಂಗಳು ವಿಧ್ವಂಸಕ ಕೃತ್ಯಗಳ ಸಂಬಂಧ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದ ತನಿಖೆ ವಿಚಾರಿಸಿ ಕ್ಲೀನ್ ಚಿಟ್ ಪಡೆದಿದ್ದರು. ಆರರೆ ಆತನ ಗ್ರಾಮವಾದ ಶಿಟ್ಲಾ ಖೇಡಾದಲ್ಲಿ ಗ್ರಾಮಸ್ಥರು ಆತನನ್ನು ಅನುಮಾನದಿಂದ ನೋಡುತ್ತಿದ್ದರು.
ತಮ್ಮ ಮನೆ ಬಾಗಿಲಿನ ಮೇಲೆ, ‘ನೀನು ಭಯೋತ್ಪಾಕ, ಪಾಕಿಸ್ತಾನಕ್ಕೆ ಹೋಗು ಎಂದು ಬರೆದಿದ್ದರು. ಇದನ್ನು ಕಂಡು ದಂಗು ಬಡಿದ ಪ್ರವೀಣ್ “ನನಗೆ ಎಷ್ಟು ಹಿಂಸೆಯಾಗುತ್ತಿದೆ ಎಂದು ದೇಶಕ್ಕೆ ತಿಳಿಸಲು ಇಚ್ಛಿಸುತ್ತೇನೆ,” ಎಂದು ಹೊರಟಿದ್ದಾರೆ.
‘ಅಬ್ದುಲ್ ಸಮದ್’ ಹೆಸರಿನ ಯುವಕನೊಬ್ಬನ ತಲಾಶೆಯಲ್ಲಿ ಬಂದಿದ್ದ ಎಟಿಎಸ್ ಜೂನ್ ೨೩ರಂದು ಪ್ರವೀಣ್ ಮನೆ ಬಾಗಿಲು ತಟ್ಟಿತ್ತು. ಇಸ್ಲಾಂಗೆ ಮತಾಂತರಗೊಂಡ ಯುವಕರ ಪಟ್ಟಿಯೊಂದನ್ನು ಆಧರಿಸಿ ಬಂದಿದ್ದ ಎಟಿಎಸ್ ಮಂದಿಗೆ, ಆ ಪಟ್ಟಿಯಲ್ಲಿ ಪ್ರವೀಣ್ ಮತಾಂತರಗೊಂಡು ಸಮದ್ ಎಂಬ ಹೆಸರಿಟ್ಟುಕೊಂಡಿರುವುದಾಗಿ ಕಂಡಿತ್ತು.

Ad Widget . Ad Widget . Ad Widget .

Leave a Comment

Your email address will not be published. Required fields are marked *