ಸಮಗ್ರ ನ್ಯೂಸ್ : ಅಕ್ಷಯ ತೃತೀಯ ಅಂದ್ರೆ ಜನರು ಒಡವೆ ವಸ್ತ್ರ ತಗೋಬೇಕು. ಇದರಿಂದ ನಮ್ಮ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಈ ನಂಬಿಕೆಯಿಂದ ಅನೇಕ ಜನರು ಸಾಲ ಸೋಲ ಮಾಡಿ ಒಡವೆ ವಸ್ತ್ರ ಖರೀದಿ ಮಾಡುತ್ತಾರೆ. ಆದ್ರೆ ಇದೆಲ್ಲವನ್ನೂ ಮೀರುವಂತೆ ಮೈಸೂರಿನ ಸ್ಪಂದನ ಸೇವಾ ಸಂಸ್ಥೆ ವಿಭಿನ್ನವಾಗಿ ಅಕ್ಷಯ ತೃತೀಯ ದಿನವನ್ನು ಆಚರಿಸಿದೆ.
ಮೈಸೂರಿನ ಸ್ಪಂದನ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಮಮತಾಶೆಟ್ಟಿ ಅವರು ಅಕ್ಷಯ ತೃತೀಯ ದಿನ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹಸಿದವರಿಗೆ ಊಟ ಮತ್ತು ಸಿಹಿಯನ್ನು ಹಂಚುವ ಮೂಲಕ ವಿಭಿನ್ನವಾಗಿ ಆಚರಣೆ ಮಾಡಿದರು.
ಈ ವೇಳೆ ಕಾರ್ಯದರ್ಶಿ ಸರಸ್ವತಿ, ಸದಸ್ಯರಾದ ರಾಘವೇಂದ್ರ ಹಾಜರಿದ್ದರು. ಈ ವೇಳೆ ಮಾತನಾಡಿದ ಮಮತಾಶೆಟ್ಟಿ ಅಕ್ಷಯ ತೃತೀಯ ಕೇವಲ ಒಡವೆ ವಸ್ತ್ರ ಖರೀದಿ ಮಾಡುವುದಲ್ಲ. ಅದರ ಬದಲಿಗೆ ಹಸಿದವರಿಗೆ ಒಂದೊತ್ತು ಊಟ ಹಾಕಿ ಆ ಮೂಲಕವೂ ತಮ್ಮ ಸಂಪತ್ತನ್ನು ಅಕ್ಷಯ ಮಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.