ಸಮಗ್ರ ನ್ಯೂಸ್: ಚಕ್ರವರ್ತಿ ಸೂಲಿಬೆಲೆಯ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಮೋ ಬ್ರಿಗೇಡ್ ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ. ನಮೋಬ್ರಿಗೇಡ್ 2.O ಇಷ್ಟು ದಿನ ಮೋದಿ ಪ್ರಧಾನಿಯಾಗಲು ಏನೇನು ಪ್ರಯತ್ನ ಮಾಡಬಹುದೋ, ಆ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ರಾಜಕೀಯಕ್ಕಾಗಿ ಅಷ್ಟೇ ಬ್ರಿಗೇಡ್ ನಡೆಸಲು ಇಷ್ಟವಿಲ್ಲವೆಂದು, ಚುನಾವಣೆ ಮುಗಿದ ಬಳಿಕವೇ, ನಮೋ ಬ್ರಿಗೇಡ್ ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಜೂನ್ 25ಕ್ಕೆ ನಮೋ ಬ್ರಿಗೇಡ್ ಲಾಂಚ್ ಆಗಿತ್ತು. ಬಳಿಕ ರಾಜ್ಯದ ಹಲವು ಜಿಲ್ಲೆಗಳಿಗೆ ನಾನೇ ಹೋಗಿ ಬೈಠಕ್‌ಗಳನ್ನು ಮಾಡಿದ್ದೇನೆ. ಬಿಜೆಪಿ ಕಾರ್ಯಕರ್ತರು, ಬಿಜೆಪಿಗಾಗಿ ಕೆಲಸ ಮಾಡುವುದನ್ನು ಬಿಟ್ಟಿದ್ದ ತರುಣರನ್ನೆಲ್ಲ ಸೇರಿಸಿ, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಏನೇನು ಕೆಲಸ ಮಾಡಬೇಕೋ, ಆ ಎಲ್ಲ ಕೆಲಸಗಳನ್ನು ಮಾಡಲಾಗಿತ್ತು. ಈ ಮೂಲಕ ಎಲ್ಲೆಡೆ ನಮೋ ಬ್ರಿಗೇಡ್ ಕೆಲಸಗಳನ್ನು ಲಾಂಚ್ ಮಾಡಲು ಬೇಕಾಗುವ ಘಟಕಗಳ ವ್ಯವಸ್ಥೆ ಮಾಡಿಕೊಂಡೆವು ಎಂದು ಚಕ್ರವರ್ತಿ ಹೇಳಿದ್ದಾರೆ.
ಹೀಗೆ ಜೂನ್ 25ರಿಂದ ಇಲ್ಲಿಯವರೆಗೆ ನಮೋ ಬ್ರಿಗೇಡ್ ಹೇಗೆ ಕೆಲಸ ಮಾಡಿತ್ತು ಎಂಬ ಬಗ್ಗೆ ಮತ್ತು ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳ ಬಗ್ಗೆ ವಿವರಿಸಿರುವ ಚಕ್ರವರ್ತಿ ಸೂಲಿಬೆಲೆ, ನಮ್ಮ ಜೊತೆ ಇದ್ದು, ಬ್ರಿಗೇಡ್‌ಗಾಗಿ ಸಪೋರ್ಟ್ ಮಾಡಿದವರಿಗೆ ಧನ್ಯವಾದಗಳು. ಎಷ್ಟೋ ಜನ ನನಮ್ಮ ಬ್ರಿಗೇಡ್‌ಗಾಗಿ ಪ್ರತೀ ತಿಂಗಳು ದುಡ್ಡನ್ನು ಕೊಡುತ್ತಿದ್ದರು. ದೊಡ್ಡ ಮೊತ್ತದ ದೇಣಿಗೆಗಳನ್ನು ನೀಡಿದ್ದಾರೆ. ಸಮಾಜಕ್ಕೆ ಒಳಿತಾಗುವ ಸಮರ್ಥ ಕೆಲಸವನ್ನು ಮಾಡಿ ನಮೋ ಬ್ರಿಗೇಡನ್ನು ಸಮಾಜಕ್ಕೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.