ಸಮಗ್ರ ನ್ಯೂಸ್: 40 ವರ್ಷದ ನಂತರ, ಕಳೆದ ಅಕ್ಟೋಬರ್‍ನಲ್ಲಿ ಪ್ರಾರಂಭಗೊಂಡು ಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿದ್ದ ಭಾರತದ ನಾಗಪಟ್ಟಣಂ ಮತ್ತು ಶ್ರೀಲಂಕಾದ ಜಾಪ್ಪಾ ಜಿಲ್ಲೆಯ ಕಾಂಕೆಸಂತುರೈ (ಕೆಕೆಎಸ್) ನಗರದ ನಡುವಿನ ದೋಣಿ ಸೇವೆಯು ಮೇ 13ರಿಂದ ಪುನರಾರಂಭಗೊಳ್ಳಲಿದೆ ಎಂದು ಭಾರತೀಯ ಹೈಕಮಿಷನ್ ಸೋಮವಾರ ತಿಳಿಸಿದೆ. ದೋಣಿ ಸೇವೆಯನ್ನು ಮತ್ತೆ ಪ್ರಾರಂಭಿಸುತ್ತಿರುವುದು, ಭಾರತ ಸರ್ಕಾರದ ಜನಕೇಂದ್ರಿತ ನೀತಿಯ ದೃಢೀಕರಣವಾಗಿದೆ ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.
ಕಾಂಕೆಸಂತುರೈ ಬಂದರನ್ನು ಪುನಶ್ಚತನಗೊಳಿಸಲು ಯೋಜನಾ ವೆಚ್ಚವಾದ ರೂ. 531 ಕೋಟಿಯನ್ನು ಭಾರತವು ಶ್ರೀಲಂಕಾಕ್ಕೆ ನೀಡಿದೆ.ಶ್ರೀಲಂಕಾದ ಕಾಂಕೆಸಂತುರೈ ಬಂದರು (ಕೆಕೆಎಸ್) ಸುಮಾರು 16 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದು ಪಾಂಡಿಚೇರಿಯ ಕರೈಕಲ್ ಬಂದರಿನಿಂದ 104 ಕಿಲೋಮೀಟರ್ ದೂರದಲ್ಲಿದೆ. ತಮಿಳುನಾಡಿನ ನಾಗಪಟ್ಟಣಂನಿಂದ ಕಾಂಕೆಸಂತುರೈ ಬಂದರಿಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕ ದೋಣಿಯು ಮೂರೂವರೆ ಗಂಟೆಗಳಲ್ಲಿ 111 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.