ಸಮಗ್ರ ನ್ಯೂಸ್: ಹಮಾಸ್ ವಿರುದ್ಧ ಇಸ್ರೇಲ್ ಸತತ ದಾಳಿ ನಡೆಸುತ್ತಿರುವ ಹೊತ್ತಿನಲ್ಲಿಯೇ, ಹಮಾಸ್ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಕಾರಣಕ್ಕಾಗಿ ಇಸ್ರೇಲ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್‍ಜಜೀರಾ ಸುದ್ದಿವಾಹಿನಿಯನ್ನು ಇಸ್ರೇಲ್ ಸ್ಥಗಿತಗೊಳಿಸಿದೆ. ಚಾನೆಲ್ ಬಂದ್ ಮಾಡುವ ಕುರಿತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಣೆ ಮಾಡಿದ್ದು, ಅಲ್‍ಜಜೀರಾ ಚಾನೆಲ್‍ಅನ್ನು ಇಸ್ರೇಲ್‍ನಲ್ಲಿ ಸ್ಥಗಿತಗೊಳಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹಾಗಾಗಿ, ಚಾನೆಲ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಜಮಿನ್ ನೆತನ್ಯಾಹು ಎಕ್ಸ್ ಜಾಲತಾಣದಲ್ಲಿ ಪೆÇೀಸ್ಟ್ ಮಾಡಿದ್ದಾರೆ.
ಈ ಕೂಡಲೇ ಅಲ್‍ಜಜೀರಾ ಚಾನೆಲ್ ಅನ್ನು ಸ್ಥಗಿತಗೊಳಿಸುತ್ತೇವೆ. ಕೇಬಲ್ ಹಾಗೂ ಸ್ಯಾಟಲೈಟ್ ಟೆಲಿವಿಷನ್ ಕಂಪನಿಗಳಿಂದ ಚಾನೆಲ್ ಅನ್ನು ತೆಗೆಯಲಾಗುತ್ತದೆ. ವರದಿಗಾರರು ಕೂಡ ಕೆಲಸ ಮಾಡಲು ಬಿಡುವುದಿಲ್ಲ ಎಂದು ಬೆಂಜಮಿನ್ ನೆತನ್ಯಾಹು ವಕ್ತಾರ (ಅರಬ್ ವಲ್ರ್ಡ್) ಒಫಿರ್ ಜೆಂಡಲ್‍ಮ್ಯಾನ್ ಕೂಡ ಮಾಹಿತಿ ನೀಡಿದ್ದಾರೆ
ಇದಾದ ಬೆನ್ನಲ್ಲೇ, ಚಾನೆಲ್‍ಗೆ ತೆರಳಿದ ಪೆÇಲೀಸರು ಸುದ್ದಿವಾಹಿನಿಯನ್ನು ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ಅಲ್‍ಜಜೀರಾ ಪ್ರತಿಕ್ರಿಯಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದೆ. ಕತಾರ್ ಮೂಲದ ಸುದ್ದಿವಾನಿಯಾದ ಅಲ್‍ಜಜೀರಾ, ಹಮಾಸ್ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಇಸ್ರೇಲ್ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬುದು ಇಸ್ರೇಲ್ ವಾದವಾಗಿದೆ.