ಸಮಗ್ರ ನ್ಯೂಸ್: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. SITಗೆ ಪ್ರಕರಣ ವಹಿಸಿದ್ದು, ಇಂದು ವಿಚಾರಣೆಗೆ ಐವರು ಸಂತ್ರಸ್ತೆಯರು ಹಾಜರಾಗಿದ್ದರು.
ಇನ್ನೂ ಇದೇ ವಿಚಾರವಾಗಿ ಮಾಜಿ ಸಚಿವ ಎಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದು ನಾವೆಲ್ಲಾ ಇಲ್ಲೇ ಇದ್ದೇವೆ, ಎಲ್ಲೂ ಓಡಿ ಹೋಗಲ್ಲ. ಹಾಸನ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಸದ್ಯ ನಾನು ಏನೂ ರಿಯಾಕ್ಟ್ ಮಾಡಲ್ಲ, ಕಾನೂನು ರೀತಿ ಪ್ರಕರಣವನ್ನು ನಾವು ಎದುರಿಸುತ್ತೇವೆ. ವಿಚಾರಣೆಗೆ ಕರೆದಾಗ ವಿದೇಶದಿಂದ ಪುತ್ರ ಬರುತ್ತಾನೆ ಎಂದಿದ್ದಾರೆ.
4-5 ವರ್ಷದ ಹಿಂದೆ ಘಟನೆ ನಡೆದಿದೆ ಎಂದು ಈಗ ಕೇಸ್ ಹಾಕಿದ್ದಾರೆ. ಇದು ಯಾವ ತರಹದ್ದು ಎಂದು ಏನೂ ಮಾತನಾಡಲ್ಲ. ವಿಡಿಯೊ ಸೇರಿ ಯಾವುದರ ಬಗ್ಗೆಯೂ ಮಾತನಾಡಲ್ಲ ಎಂದು ತಿಳಿಸಿದ್ದಾರೆ. ಈ ಕೇಸ್ ಬಗ್ಗೆ ನಾನು ದೇವೆಗೌಡರ ಜೊತೆ ಮಾತನಾಡಿಲ್ಲ, ನಮ್ಮನ್ನು ಉಚ್ಚಾಟಿಸುವುದು ಪಕ್ಷಕ್ಕೆ ಬಿಟ್ಟ ನಿರ್ಧಾರ, ಇದೆಲ್ಲ ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ.
ಈಗ ಅವರ ಸರ್ಕಾರ ಇದೆ ಏನು ಬೇಕಿದ್ರೂ ಮಾಡಲಿ, ಈ ಪ್ರಕರಣ ಎಸ್ಐಟಿ ತನಿಖೆಗೆ ನೀಡಲಾಗಿದೆ. ಕಾನೂನು ರೀತಿಯಲ್ಲಿ ಎದುರಿಸುತ್ತೇವೆ. ಅವರು ತನಿಖೆಗೆ ಕರೆದಾಗ ನಾನು ಹೋಗುತ್ತೇನೆ. ದೇವೆಗೌಡರ ಕುಟುಂಬದ ಮೇಲೆ ತನಿಖೆಗಳು ಆಗುತ್ತಿರುತ್ತದೆ ಎಂದಿದ್ದಾರೆ.
ಇನ್ನೂ ಪ್ರಜ್ವಲ್ ಮಾಮೂಲಿಯಾಗಿ ವಿದೇಶಕ್ಕೆ ಹೋಗಿದ್ದಾನೆ. ಎಫ್ಐಆರ್ ಹಾಕುವುದು ಗೊತ್ತಿತ್ತಾ? ತನಿಖೆಗೆ ಕರೆದಾಗ ಪ್ರಜ್ವಲ್ ಬರುತ್ತಾನೆ ಎಂದಿದ್ದಾರೆ