ಸಮಗ್ರ ನ್ಯೂಸ್: ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಕೊಣಾಜೆ ಸಮೀಪದ ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಿಯ ದ್ವೀಪದ ಮತದಾರರು ದೋಣಿಯ ಮೂಲಕ ನೇತ್ರಾವತಿ ನದಿಯನ್ನು ದಾಟಿ ಬಂದು ಪಾವೂರು ಗ್ರಾಮದ ಗಾಡಿಗದ್ದೆ ಶಾಲೆಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು.
ಈ ದ್ವೀಪದ ಜನರು ಇಲ್ಲಿ ಸಂಪರ್ಕ ಸೇತುವೆ ಇಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ದ್ವೀಪದಲ್ಲಿ ಸುಮಾರು 40 ಕ್ಕೂ ಹೆಚ್ಚು ಕುಟುಂಬಗಳಿದ್ದು, ಸುಮಾರು 150 ಮಂದಿ ಮತದಾರರಿದ್ದಾರೆ.
ಇಲ್ಲಿಯ ಮತದಾರರು ದೋಣಿಯ ಮೂಲಕ ನೇತ್ರಾವತಿ ನದಿಯನ್ನು ದಾಟಿ ಗಾಡಿಗದ್ದೆ ಮತದಾನ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.