ಸಮಗ್ರ ನ್ಯೂಸ್: ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 6 ರಿಂದ 2024 ರ ಆರಂಭವಾಗಲಿರುವ ಟಿ20 ವಿಶ್ವಕಪ್‍ನ ಬ್ರಾಂಡ್ ಅಂಬಾಸಿಡರ್ ಆಗಿ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಎರಡು ವಿಶ್ವಕಪ್‍ಗಳ ಹೀರೋ ಯುವರಾಜ್ ಸಿಂಗ್ ಅವರನ್ನು ಐಸಿಸಿ ನೇಮಿಸಿದೆ. ಯುವರಾಜ್ ಸಿಂಗ್ ಹೊರತಾಗಿ, ಪ್ರಸ್ತುತ ಕ್ರಿಸ್ ಗೇಲ್ ಮತ್ತು ಉಸೇನ್ ಬೋಲ್ಟ್ ಕೂಡ ಈ ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್‍ಗಳಾಗಿದ್ದಾರೆ.
2007ರ ಟಿ20 ವಿಶ್ವಕಪ್‍ನಲ್ಲಿ ಅವರು ಬಾರಿಸಿದ ಆರು ಸಿಕ್ಸರ್‍ಗಳು, ಅಲ್ಲದೆ ಟಿ20 ವಿಶ್ವಕಪ್‍ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ದಾಖಲೆಯೂ ಯುವರಾಜ್ ಹೆಸರಿನಲ್ಲಿದೆ.
ಇದರೊಂದಿಗೆ 2007ರ ಟಿ20 ವಿಶ್ವಕಪ್ ಅನ್ನು ಟೀಂ ಇಂಡಿಯಾ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪಾತ್ರವೂ ಆಗಾದವಾಗಿತ್ತು. ಇದಲ್ಲದೆ ಭಾರತ 2011ರ ಏಕದಿನ ವಿಶ್ವಕಪ್ ಗೆಲುವಲ್ಲಿಯೂ ಯುವರಾಜ್ ಪ್ರಮುಖ ಪಾತ್ರವಹಿಸಿದ್ದರು.
ಈ ಬಾರಿಯ ಟಿ20 ವಿಶ್ವಕಪ್ ಜೂನ್ 01 ರಿಂದ ಆರಂಭವಾಗುವ ಮಿನಿ ಸಮರ ಜೂನ್ 29 ರಂದು ಅಂತ್ಯಗೊಳ್ಳಲಿದೆ. ಒಟ್ಟು 20 ತಂಡಗಳು ಈ ಲೀಗ್‍ನಲ್ಲಿ ಭಾಗವಹಿಸುತ್ತಿವೆ. ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಐಲೆರ್ಂಡ್, ಪಾಕಿಸ್ತಾನ, ಅಮೆರಿಕ ಮತ್ತು ಕೆನಡಾ ತಂಡಗಳನ್ನು ಎದುರಿಸಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಟೂರ್ನಿಗೆ ಎಲ್ಲಾ ತಂಡಗಳನ್ನು ಪ್ರಕಟಿಸಲಾಗುತ್ತದೆ.