Ad Widget .

ಗದಗ: ಬಾಲ್ಯವಿವಾಹ ತಡೆದ ಅಧಿಕಾರಿಗಳು|ಪೋಷಕರಿಂದ ಮುಚ್ಚಳಿಕೆ ಪತ್ರ

ಸಮಗ್ರ ನ್ಯೂಸ್: ಬಾಲ್ಯ ವಿವಾಹ ಅಪರಾಧ. ಹಿಂದೆ ಈ ಅನಿಷ್ಠ ಪದ್ಧತಿ ಇತ್ತು. ಆದರೆ ಈಗ ಈ ಪದ್ಧತಿಗೆ ಬ್ರೇಕ್ ಬಿದ್ದಿದೆ. ಆದ್ರೆ ಅಲ್ಲೊಂದು ಇಲ್ಲೊಂದು ಈ ವಿಚಾರ ಬೆಳಕಿಗೆ ಬರುವುದು ಮಾತ್ರ ತಪ್ಪಿಲ್ಲ. ಹೌದು, ಇಂದು ಗದಗದಲ್ಲಿ ನಡೀತಿದ್ದ ಬಾಲ್ಯ ವಿವಾಹವೊಂದಕ್ಕೆ ಅಧಿಕಾರಿಗಳು ಭೇಟಿ ನೀಡಿ ನಿಲ್ಲಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನಗರದ ಕರ್ನಾಟಕ ಭವನದಲ್ಲಿ ಗದಗ ತಾಲೂಕಿನ ಕೊಟುಮಚಗಿ ಗ್ರಾಮದ ಇಬ್ಬರು ಸಹೋದರರ ಮದುವೆ ನಿಶ್ಚಿಯ ಮಾಡಲಾಗಿತ್ತು. ಆದ್ರೆ, ಕಿರಿಯ ಸಹೋದರನ ಮದುವೆ ಆಗುತ್ತಿರುವ ಬಾಲಕಿಗೆ ಇನ್ನೂ 18 ವರ್ಷ ಆಗಿರಲಿಲ್ಲ. ಆದರೂ ಕೂಡ ಪೋಷಕರು ಸೇರಿಕೊಂಡು ಮದುವೆ‌ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದರು. ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಎನ್ನುವ ಸಮಯದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಎಂಟ್ರಿ ನೀಡಿದ್ದರು. ಈ ವೇಳೆ ಬಾಲಕಿಯ ವಯಸ್ಸು, ವಿವರ, ನೀಡಿದಾಗ ಬಾಲಕಿಗೆ 18 ವರ್ಷ ತುಂಬಲು ಇನ್ನೂ 15 ದಿನಗಳು ಬಾಕಿ ಇದ್ದವು. ಹೀಗಾಗಿ ಮದುವೆಗೆ ಬ್ರೇಕ್ ಹಾಕಿದ್ದಾರೆ.

Ad Widget . Ad Widget . Ad Widget .

ಪೋಷಕರ ಮನವೊಲಿಸಿ, ಪೋಷಕರಿಂದ ಮುಚ್ವಳಿಕೆ ಪತ್ರವನ್ನು ಬರಿಸಿಕೊಂಡು ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಸಮಾಜದ ಮುಖಂಡರು ಕೂಡ ಕುಟುಂಬದ ಮನವೊಲಿಸಿ ಅಧಿಕಾರಿಗಳ ಕಾರ್ಯಕ್ಕೆ ಸಾಥ್ ನೀಡಿದರು. ಇನ್ನು ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡುತ್ತಿದ್ದ ಪೋಷಕರು ಅನಕ್ಷರಸ್ಥರು, ಅವರಿಗೆ ಅಷ್ಟೊಂದು ಕಾನೂನು ಗೊತ್ತಿಲ್ವಂತೆ. ಹೀಗಾಗಿ ಸಹೋದರನ ಜೊತೆ ಕಿರಿಯ ಸಹೋದರನ ಮದುವೆ ಮಾಡಿದ್ರೆ, ಹಣವು ಉಳಿಯುತ್ತೇ ಎನ್ನುವ ಲೆಕ್ಕಾಚಾರ ಹಾಕಿಕೊಂಡು ಎರಡು ಮದುವೆ ಮಾಡಲು ಮುಂದಾಗಿದ್ದರು. ಆದ್ರೆ, ಕಿರಿಯ ಸಹೋದರ ಮದುವೆ ಆಗುವ ಬಾಲಕಿ ಆಗಿರೋದರಿಂದ ಮದುವೆ ಸ್ಟಾಪ್ ಮಾಡಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಹಾಗೂ ಬಂಧು ಬಳಗ ಕೆಲವು ಸಮಯ ವಿಚಲಿತರಾಗಿದ್ರು. ಹಿರಿಯರು ಹಾಗೂ ಅಧಿಕಾರಿಗಳು ಸಮಾಲೋಚನೆ ಮಾಡಿ, ಹಿರಿಯ ಸಹೋದರನ ಮದುವೆ ಒಪ್ಪಿಗೆ ನೀಡಿದರು.

ಅಷ್ಟೇ ಅಲ್ಲದೆ ಬಾಲಕಿಗೆ 18 ವರ್ಷವಾದ ಮೇಲೆ ಮದುವೆ ಮಾಡುತ್ತೇವೆ ಎಂದು ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟರು.

Leave a Comment

Your email address will not be published. Required fields are marked *