ಸಮಗ್ರ ನ್ಯೂಸ್: ನಾಳೆ ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಜನರೆಲ್ಲ ವೋಟ್ ಮಾಡಲು ಊರಿನತ್ತ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನಲೆ ಎಲೆಕ್ಷನ್ ಡ್ಯೂಟಿಗಾಗಿ ಕೆಎಸ್ಆರ್ಟಿಸಿ ಯಿಂದ 2100 ಬಸ್ಗಳನ್ನು ನೀಡಲಾಗಿದೆ. ಹೀಗಾಗಿ ಬಸ್ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಇತ್ತ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಆದರೆ ಪ್ರಯಾಣಿಕರು ಬಸ್ ಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಚಿತ್ರದುರ್ಗ, ತುಮಕೂರು , ಹಾಸನ ಕಡೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಬಸ್ಗಾಗಿ ಮೆಜೆಸ್ಟಿಕ್ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಇನ್ನು 2,100 ಕೆಎಸ್ಆರ್ಟಿಸಿ ಮತ್ತು 1,700 ಬಿಎಂಟಿಸಿ ಬಸ್ಗಳನ್ನು ಆಯೋಗ ಬಳಕೆ ಮಾಡಿಕೊಂಡ ಹಿನ್ನಲೆ ಸರ್ಕಾರಿ ಬಸ್ಗಳಿಗೆ ಕಿ.ಮೀ.ಗೆ 57 ರೂ. ದರ ನಿಗದಿ ಮಾಡಲಾಗಿದೆ. ಹೀಗಾಗಿ ಎರಡು ದಿನ ಸರ್ಕಾರಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.
ಚುನಾವಣಾ ಕಾರ್ಯಕ್ಕೆ ಖಾಸಗಿ ವಾಹನವನ್ನು ಬಳಸಲಾಗಿದೆ. ಇದರಿಂದ ಮತ ಚಲಾಯಿಸಲು ಹೊರಟಿರುವ ಜನಸಾಮನ್ಯರಿಗೆ ತೊಂದರೆಯಾಗಿದೆ