ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಗದಗದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ಈ ವಿಚಾರಣೆಯನ್ನು ತನಿಖೆ ನಡೆಸಿದ್ದಾಗ ಮನೆಯ ಮಗನೇ ಇಡೀ ಕುಟುಂಬವನ್ನು ಮುಗಿಸಲು ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ತನಿಖೆ ನಡೆಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಈ ವೇಳೆ ಕೊಲೆ ಹಿಂದಿನ ಸಂಚು ರಿವೀಲ್ ಆಗಿದೆ. ಪ್ರಕಾಶ್ ಬಾಕಳೆ ಹಿರಿಯ ಮಗ ವಿನಾಯಕ್ ಬಾಕಳೆಯೇ ಕೊಲೆಗೆ ಸುಪಾರಿ ನೀಡಿರುವುದು ತಿಳಿದುಬಂದಿತ್ತು. ಅಲ್ಲದೇ ಮಹಾರಾಷ್ಟ್ರ ಮೂಲದ ಫಯಾಜ್ ಆ್ಯಂಡ್ ಗ್ಯಾಂಗ್ ಗೆ ಸುಪಾರಿ ಕೊಟ್ಟಿರುವುದು ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು. ಇನ್ನೂ ಈ ಕೊಲೆಗೆ ಆಸ್ತಿ ಹಂಚಿಕೆ ವಿಷಯ ಇರುವ ಬಗ್ಗೆ ಅನುಮಾನವು ಇದೆ.
ಆರು ತಿಂಗಳ ಹಿಂದೆ ವಿನಾಯಕ ಹಾಗೂ ಅವರ ತಂದೆ ಪ್ರಕಾಶ ಬಾಕಳೆ ಮಧ್ಯೆ ಆಸ್ತಿ ವಿಷಯಕ್ಕೆ ಮನಸ್ತಾಪ ಉಂಟಾಗಿದೆ. ನನ್ನ ಅನುಮತಿ ಇಲ್ಲದೆ ಆಸ್ತಿ ಮಾರಾಟ ಮಾಡಬಾರದು ಎಂದು ವಿನಾಯಕನಿಗೆ ತಂದೆ ಪ್ರಕಾಶ ಬಾಕಳೆ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ತಂದೆ ಪ್ರಕಾಶ್, ಪ್ರಕಾಶ್ ಎರಡನೇ ಪತ್ನಿ ಸುನಂದಾ, ಹಾಗೂ ಪ್ರಕಾಶ್ 2ನೇ ಪತ್ನಿ ಪುತ್ರ ಕಾರ್ತಿಕ್ ಹತ್ಯೆಗೆ ಸ್ಕೆಚ್ ಹಾಕಿದ್ದರು.
ಈ ವಿನಾಯಕ ಬಾಕಳೆ ಫೈರೋಜ್ ಖಾಜಿಗೆ ಸುಪಾರಿ ನೀಡಿದ್ದು, 65 ಲಕ್ಷ ರೂ.ಗೆ ಮಾತುಕತೆ ನಡೆಸಿ ಮುಂಗಡವಾಗಿ 2 ಲಕ್ಷ ರೂ. ನೀಡಿದ್ದ. ಆದರೆ ಬೆಳಗ್ಗಿನ ಜಾವ ಎಂಟ್ರಿ ನೀಡಿದ್ದ ಆರೋಪಿಗಳು ಕಾರ್ತಿಕ್ ಬಾಕಳೆ (28), ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಆಕಾಂಕ್ಷಾ (16) ಹತ್ಯೆ ಮಾಡಿದ್ದರು.
ಇನ್ನೂ ಈ ಕೃತ್ಯ ನಡೆದ 72 ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ತಂಡಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರಿಂದ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.