ಬೆಂಗಳೂರು: ‘ತಂದೆ ಮರಣಹೊಂದಿದ ದಿನವೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಇತಿಹಾಸ ನಿಮ್ಮದು’ ಎಂದು ಟ್ವೀಟ್ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ತಿರುಗೇಟು ನೀಡಿದೆ.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ವಿಷಯ ಪ್ರಸ್ತಾಪಿಸುವಾಗ ಕಣ್ಣೀರು ಹಾಕಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರು ಯಾರು? ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಡಿಕೆಶಿ ಹೇಳಿಕೆ ನೀಡಿದ್ದರು.
ಡಿಕೆಶಿ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ, ‘ಮಾನ್ಯ ಡಿಕೆಶಿ ಅವರೇ, ತಂದೆ ಇಹಲೋಕ ತ್ಯಜಿಸಿದ ದಿನವೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ದಾಹ ತೋರ್ಪಡಿಸಿದ ಇತಿಹಾಸ ನಿಮ್ಮದು. ಹಿರಿಯ ನಾಯಕರ ಕಣ್ಣೀರು ಹಾಕಿಸುವುದು ಕಾಂಗ್ರೆಸ್ ಪಕ್ಷದ ಹುಟ್ಟು ಗುಣ. ಆನಂದ ಭಾಷ್ಪಕ್ಕೂ, ಕಣ್ಣೀರಿಗೂ ವ್ಯತ್ಯಾಸವಿದೆ. ಇದರಲ್ಲಿ ಬಹಿರಂಗಗೊಳಿಸುವ ಗುಟ್ಟೇನು ಇಲ್ಲ’ ಎಂದು ಹೇಳಿದೆ.
ಮಾನ್ಯ ಡಿಕೆಶಿ ಅವರೇ,
— BJP Karnataka (@BJP4Karnataka) July 26, 2021
ತಂದೆ ಇಹಲೋಕ ತ್ಯಜಿಸಿದ ದಿನವೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ದಾಹ ತೋರ್ಪಡಿಸಿದ ಇತಿಹಾಸ ನಿಮ್ಮದು.
ಹಿರಿಯ ನಾಯಕರ ಕಣ್ಣೀರು ಹಾಕಿಸುವುದು ಕಾಂಗ್ರೆಸ್ ಪಕ್ಷದ ಹುಟ್ಟು ಗುಣ.
ಆನಂದ ಭಾಷ್ಪಕ್ಕೂ, ಕಣ್ಣೀರಿಗೂ ವ್ಯತ್ಯಾಸವಿದೆ. ಇದರಲ್ಲಿ ಬಹಿರಂಗಗೊಳಿಸುವ ಗುಟ್ಟೇನು ಇಲ್ಲ.
6/n#ಬಿಜೆಪಿಭೀಷ್ಮ pic.twitter.com/xgkhjFxVFq