ಸಮಗ್ರ ನ್ಯೂಸ್ : ರಾಹುಲ್ ಗಾಂಧಿ ಹೆಸರು ಹೇಳಿದರೆ ಬರುವಷ್ಟು ಸೀಟ್ ಬರಲ್ಲಾ ಎಂಬುದು ಅವರಿಗೆ ಗೊತ್ತಿದೆ. ರಾಹುಲ್ ಗಾಂಧಿ ಈ ಬಾರಿ ಅಧಿಕ ಮುಸ್ಲಿಂರಿರುವ ಕೇರಳ ಕಡೆ ಹೋಗಿದ್ದಾರೆ. ಕಾಂಗ್ರೆಸ್ ನೆಲೆ ಹುಡುಕಲು ಪಾಕಿಸ್ತಾನದಲ್ಲಿ ಹುಡುಕಬೇಕಾಗುತ್ತದೆ. ಭಾರತದಲ್ಲಿ ಹಿಂದೂ ಮೆಜಾರಿಟಿ ಇದೆ. ಅದಕ್ಕೆ ಅವರು ಗೆದ್ದಾಗೆಲ್ಲಾ ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಮೈನಾರಿಟಿ ಅವರು ಇಲ್ಲಾ. ರಾಹುಲ್ ಗಾಂಧಿ ಅವರು ಪಾಕಿಸ್ತಾನದಲ್ಲಿ ನೆಲೆ ಹುಡುಕಿಕೊಳ್ಳಬಹುದು ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಅವರು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆಗಾಗಿ ವಿಜಯಪುರಕ್ಕೆ ಆಗಮಿಸಿದ್ದ ಅವರು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಿ.ಟಿ. ರವಿ ಅವರು, ದೇಶದಲ್ಲೆಡೆ ಮೋದಿ ಅಲೆ ಬೀಸುತ್ತಿರುವ ಸಂದರ್ಭದಲ್ಲಿ ವಿಜಯಪುರಕ್ಕೆ ಜಿಗಜಿಣಗಿ, ದೇಶಕ್ಕೆ ಮೋದಿ ಎಂಬ ಘೋಷವಾಕ್ಯದೊಂದಿಗೆ ಜನರ ಬಳಿ ಮತಯಾಚನೆ ಮಾಡುತ್ತಿದ್ದೇವೆ ಎಂದರು.
ನಮ್ಮ ಪ್ರಣಾಳಿಕೆಯಲ್ಲಿ ವಿಶೇಷವಾಗಿ ಮೋದಿ ಗ್ಯಾರಂಟಿ ಇದೆ. ಪ್ರಾಣ ಹೋದ್ರೂ ಕೊಟ್ಟ ಮಾತು ಮೀರಬಾರದೆಂಬುದು, ಸುರಕ್ಷಿತ ಭಾರತ, ಸುಶಿಕ್ಷಿತ ಭಾರತ, ಸಮೃದ್ಧ ಭಾರತ, ಆತ್ಮನಿರ್ಭರ ಭಾರತ, ಮೋದಿ ಗ್ಯಾರಂಟಿಗಳಾಗಿವೆ, ಭಾರತ ವಿಶ್ವಗುರು ಆಗಬೇಕು ಎಂಬುದು ನಮ್ಮ ಗುರಿ. ಈ ರಿಪೋರ್ಟ್ ಕಾರ್ಡ್ ನಲ್ಲಿ ಹತ್ತು ವರ್ಷಗಳಲ್ಲಿ ನಾವು ಮಾಡಿರುವ ರಿಫಾರ್ಮ್, ಪರ್ಫಾರ್ಮ್ ಮತ್ತು ಟ್ರಾನ್ಸ್ಫಾರ್ಮ್ ಈ ತ್ರಿಸೂತ್ರದಲ್ಲಿ ನಾವು ಜನರ ಮುಂದೆ ಹೋಗಿ ಅವರ ಆಶಿರ್ವಾದ ಪಡೆಯುತ್ತೇವೆ ಎಂದರು.
ಕಾಂಗ್ರೆಸ್ ಗ್ಯಾರೆಂಟಿ ಪದ ಬಳಕೆ ವಿಚಾರವಾಗಿ ಸಿ.ಟಿ.ರವಿ ಮಾತನಾಡಿ, ಗ್ಯಾರೆಂಟಿ ಅವರೇನು ಪೆಟೆಂಟ್ ಮಾಡಿಸಿದ್ದಾ? ಅಥವಾ ಅವರೇ ಹುಟ್ಟುಹಾಕಿದ್ದಾ? ಹಾಗೇನಿಲ್ಲ. ಮೋದಿ ಗ್ಯಾರೆಂಟಿ ದೇಶದ ಭದ್ರತೆಗೆ ಇದೆ, ಕಾಂಗ್ರೆಸ್ ಗ್ಯಾರೆಂಟಿ ಲೂಟಿ ಹೊಡೆಯಲು ಆಗಿದೆ. ನಮ್ಮ ಯೋಜನೆಗಳು ಮೂಲ ಸೌಕರ್ಯಗಳ ಅಭಿವೃದ್ಧಿ ಕೆಲಸಕ್ಕೆ ಕುತ್ತು ತಂದಿಲ್ಲ. ಕಳೆದ ಹತ್ತು ತಿಂಗಳಲ್ಲಿ ಇವರು ಒಂದೂ ರೂಪಾಯಿ ಕೆಲಸ ಮಾಡಿಲ್ಲ. ಗುತ್ತಿಗೆದಾರರು ಬಿಲ್ ಆಗಿಲ್ಲ ಎಂದಿದ್ದಕ್ಕೆ ನಾನೇನು ನೋಟು ಪ್ರಿಂಟ್ ಮಾಡಲಾ ಎಂದು ಸಿಎಂ ಹೇಳಿದ್ದಾರೆ ಎಂದರು.
ಬೆಲೆಏರಿಕೆ, ಭ್ರಷ್ಟಾಚಾರ ವ್ಯಾಪಕಗೊಳಿಸಿದ್ದು, ಭ್ರಷ್ಟಾಚಾರಕ್ಕೆ ಹೊಸ ಹೊಸಮಾರ್ಗ ಹುಡುಕಿದ್ದು, ಅಸಂತುಷ್ಠರನ್ನು ಸಂತುಷ್ಟಗೊಳಿಸುವುದು ಕಾಂಗ್ರೆಸ್ ನ ಗ್ಯಾರಂಟಿಯಾಗಿದೆ. ಕ್ಯಾಬಿನೆಟ್ ನಲ್ಲಿ ಸಿಎಂ ಸೇರಿ 34 ಸಚಿವರಿರುತ್ತಾರೆ. ಆದರೆ ಸಿಎಂ ಕಾಂಗ್ರೆಸ್ ನ 56 ಜನರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಿದ್ದಾರೆ. ಸಿಎಂ ಅವರು ದಾಖಲೆ ಪ್ರಮಾಣದಲ್ಲಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ಲೂಟಿ ಹೊಡೆಯಲು ಲೈಸೆನ್ಸ್ ಕೊಟ್ಟಿದ್ದಾರೆ. ದೂರದೃಷ್ಠಿ ಇಲ್ಲದ ಮೂಲ ಸೌಕರ್ಯಕ್ಕೆ ಆದ್ಯತೆ ಕೊಡುವುದು ಕಾಂಗ್ರೆಸ್ ನೀತಿಯಾದರೆ ಮೂಲಸೌಲಭ್ಯದ ಅಭಿವೃದ್ಧಿಯ ಮೂಲಕ ಜನರ ಬದುಕನ್ನು ಬದಲಾಯಿಸಿ, ಭಾರತವನ್ನು ಅಭಿವೃದ್ಧಿಗೊಳಿಸಿ ದೇಶವನ್ನು ವಿಶ್ವಗುರುವನ್ನಾಗಿ ಮಾಡುವುದು ಬಿಜೆಪಿಯ ಗ್ಯಾರಂಟಿಯಾಗಿದೆ ಎಂದರು.