ಸಮಗ್ರ ನ್ಯೂಸ್:ತನ್ನ ತೋಟದಲ್ಲಿ ದನಗಳನ್ನು ಸಂಗ್ರಹಿಸಿಟ್ಟು ನಂತರ ಅದನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಬೇದಿಸಿದ್ದಾರೆ.
ಸಿದ್ದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊಸೂರು ಬೆಟ್ಟಗೇರಿ ನಿವಾಸಿ ಪಟ್ಟಡ.ಟಿ.ಉತ್ತಯ್ಯ ಎಂಬುವರು ಎ. 4ರಂದು ಸಿದ್ದಾಪುರ ಠಾಣೆಗೆ ದೂರು ನೀಡಿ ತನ್ನ ಗದ್ದೆಯಲ್ಲಿ ಎಂದಿನಂತೆ ಹತ್ತು ಹಸುಗಳು ಮತ್ತು ಒಂದು ಗಿರ್ ತಳಿಯ ದನವನ್ನು ಮೇಯಲು ಬಿಟ್ಟಿದ್ದು ಸಂಜೆ ನೋಡಿದಾಗ ಒಂದು ಗಿರ್ ತಳಿಯೂ ಕಾಣದಾಗಿದೆ ಎಂಬ ದೂರಿನ ಅನ್ವಯ ಸಿದ್ದಾಪುರ ಪೊಲೀಸರು ಪ್ರಕರಣ ಸಂಖ್ಯೆ 37/24 ಮೊಕದಮೆ ದಾಖಲು ಮಾಡಿಕೊಂಡು, ತನಿಖೆ ನಡೆಸಿದಾಗ ಅದೇ ಗ್ರಾಮದ ಸಣ್ಣುವಂಡ ಕಿಶೋರ್ ಎಂಬುವರು ತನ್ನ ಹೊಸ ತೋಟದಲ್ಲಿ ಬೇಲಿಗೆ ಉರುಳನ್ನು ಹಾಕಿ ದನಗಳನ್ನು ಹಿಡಿದು ಕೊಂಡಗೇರಿ ಹ್ಯಾರಿಸ್ ಎಂಬುವರಿಗೆ ಮಾರಾಟ ಮಾಡಿರೋದನ್ನು ಪತ್ತೆ ಹಚ್ಚಿದ ಪೊಲೀಸರು ಇವರಿಬ್ಬರನ್ನು ಬಂಧಿಸಿ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜಾಮೀನಿನ ಮೇಲೆ ಇವರು ಬಿಡುಗಡೆಗೊಂಡಿರುತ್ತಾರೆ.
ಪಾಲಿಬೆಟ್ಟ ಹೊಸೂರು ಅತ್ತೂರು,ಗದ್ದೆ ಮನೆ, ದೇವರುಪುರ ಮತ್ತಿತರ ಭಾಗದಲ್ಲಿ ಹಲವರ ದನಗಳು ಕಾಣೆಯಾಗಿದ್ದು ಇದೀಗ ಈ ಪ್ರಕರಣದಿಂದ ಈ ತಂಡವೇ ಕಳೆದ ಎರಡು ಮೂರು ವರ್ಷಗಳಿಂದ ದನಗಳ ಸಾಗಟ ಹಾಗೂ ಮಾರಾಟ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಬಂದಿತರೊಂದಿಗೆ ಇನ್ನೂ ಕೆಲವರು ಶಾಮಿಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡರೆ ಹಲವರು ಈ ಪ್ರಕರಣದಲ್ಲಿ ಸಿಲುಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದನಗಳನ್ನು ಮಾರಾಟದ ಮಾಡಿದ ಆರೋಪಿ ಕೆಲವು ಸಂಘಟನೆಯಲ್ಲಿ ಕೂಡ ಗುರುತಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.