Ad Widget .

ಇಸ್ರೇಲ್ – ಇರಾನ್ ಯುದ್ಧ/ಇಸ್ರೇಲ್‍ನ ಶಾಲಾ-ಕಾಲೇಜುಗಳು ಬಂದ್

ಸಮಗ್ರ ನ್ಯೂಸ್: ಇಸ್ರೇಲ್ ಮೇಲೆ 200 ಕ್ಕೂ ಹೆಚ್ಚು ಡೋನ್‍ಗಳ ದಾಳಿ ನಡೆದಿರುವ ಹಿನ್ನಲೆಯಲ್ಲಿ ಎಲ್ಲಾ ಶಾಲಾ- ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಘೋಷಿಸಲಾಗಿದೆ. ಇರಾನ್ ಡೋನ್ ದಾಳಿ ನಡೆಸಿದ್ದು, ಇಸ್ರೇಲ್ ನಾಗರಿಕರು ಜಾಗರೂಕರಾಗಿರಬೇಕು. ಎಚ್ಚರಿಕೆಯ ಸೈರನ್ ಶಬ್ದ ಕೇಳಿದ ತಕ್ಷಣ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇರಾನ್ ದಾಳಿಗೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಎಚ್ಚರಿಕೆ ವಹಿಸಿವೆ. ದೇಶ ರಕ್ಷಣೆಗಾಗಿ ಆಕಾಶದಲ್ಲಿ ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. ನಾಳೆಯಿಂದ ಶಾಲಾ-ಕಾಲೇಜುಗಳು ಇರುವುದಿಲ್ಲ. ಕಾರ್ಯಕ್ರಮ, ಪ್ರವಾಸ ಯಾವುದೂ ಇರಲ್ಲ ಎಂದು ರಿಯರ್-ಅಡ್ಮಿರಲ್ ಡೇನಿಯಲ್ ಹಗರಿ ಸ್ಪಷ್ಟಪಡಿಸಿದ್ದಾರೆ. 1,000 ಕ್ಕಿಂತ ಹೆಚ್ಚು ಜನರು ಸೇರುವ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ಹೋಮ್ ಫ್ರಂಟ್ ಕಮಾಂಡ್ ಹೇಳಿದೆ ಎಂದು ಜೆರುಸಲೆಮ್ ಪೆÇೀಸ್ಟ್ ವರದಿ ಮಾಡಿದೆ.

Ad Widget . Ad Widget . Ad Widget .

ಇರಾನ್ ಸೇನೆಯು ಇಸ್ರೇಲ್ ಮೇಲೆ ನೂರಾರು ಸಂಖ್ಯೆಯಲ್ಲಿ ಡೋನ್‍ಗಳ ದಾಳಿ ನಡೆಸಿದೆ. ಈ ಬೆಳವಣಿಗೆ ಮತ್ತಷ್ಟು ಭೀತಿ ಹುಟ್ಟುಹಾಕಿದೆ. ಇರಾನ್‍ನಿಂದ ಇಸ್ರೇಲ್‍ನತ್ತ 100 ಕ್ಕೂ ಹೆಚ್ಚು ಡೋನ್‍ಗಳು ಹಾರುತ್ತಾ ಧಾವಿಸಿರುವುದು ಕಂಡುಬಂದಿದೆ ಎಂದು ಇಸ್ರೇಲ್ ಮಿಲಿಟರಿ ವರದಿಯಲ್ಲಿ ತಿಳಿಸಿದೆ. ಸಿರಿಯಾದ ಡಮಾಸ್ಕಸ್‍ನಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ಏ.1 ರಂದು ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಇರಾನ್ ರೆವಲ್ಯೂಷನರಿ ಗಾರ್ಡ್‍ನ ಇಬ್ಬರು ಬ್ರಿಗೇಡಿಯರ್ ಜನರಲ್ ಸೇರಿದಂತೆ 7 ಮಂದಿ ಸೇನಾಧಿಕಾರಿಗಳು ಹತರಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಇರಾನ್ ದಾಳಿಗೆ ಇಳಿದಿದೆ.

Leave a Comment

Your email address will not be published. Required fields are marked *