ಸಮಗ್ರ ನ್ಯೂಸ್: ಹಮಾಸ್ ಉಗ್ರರ ದಾಳಿಗೆ ಸಿಲುಕಿದ್ದ ಇಸ್ರೇಲ್ ಈಗ ಮತ್ತೊಂದು ದಾಳಿ ಎದುರಿಸುತ್ತಿದೆ. ಇಸ್ರೇಲ್ ಮೇಲೆ ಇರಾನ್ 200ಕ್ಕೂ ಅಧಿಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದು,ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದು, ಟೆಲ್‌ಅವಿವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸಹಾಯವಾಣಿ ತೆರೆದಿದೆ. “ಯಾರೂ ಆತಂಕಕ್ಕೀಡಾಗಬಾರದು. ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ” ಎಂಬ ಸಂದೇಶವನ್ನೂ ರವಾನಿಸಿದೆ
ಇಸ್ರೇಲ್‌ನಲ್ಲಿ ಈಗೀನ ಬೆಳವಣಿಗೆಯಿಂದಾಗಿ ಇಲ್ಲಿ ನೆಲೆಸಿರುವ ಭಾರತೀಯರು ಆತಂಕಪಡಬೇಕಿಲ್ಲ. ಭಾರತೀಯರು ಸ್ಥಳೀಯ ಅಧಿಕಾರಿಗಳು ಸೂಚಿಸಿರುವ ಶಿಷ್ಟಾಚಾರಗಳನ್ನು ಪಾಲಿಸಿ. ಭಾರತದ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯರ ರಕ್ಷಣೆ ದೃಷ್ಟಿಯಿಂದ ಇಸ್ರೇಲ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದೆ. ಹಾಗಾಗಿ, ಯಾರೂ ಆತಂಕಕ್ಕೀಡಾಗಬಾರದು. ಯಾವುದೇ ತುರ್ತು ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಗೆ ಕರೆ ಮಾಡಿ” ಎಂಬುದಾಗಿ ಸಹಾಯವಾಣಿ ಹೊರಡಿಸಿದೆ.
ಇರಾನ್ ನಮ್ಮ ಮೇಲೆ ದಾಳಿ ಮಾಡಿದ್ದು, ನಾವೇನೂ ಕೈಕಟ್ಟಿ ಕೂರುವವರಲ್ಲ. ನಮ್ಮ ಜತೆ ಅಮೆರಿಕ ನಿಂತಿದೆ. ಬ್ರಿಟನ್ ಕೂಡ ನಮಗೆ ಬೆಂಬಲ ಸೂಚಿಸಿದೆ. ಹಾಗಾಗಿ, ಇರಾನ್‌ಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ” ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಆದರೆ ಇಸ್ರೇಲ್ ಗೆ ಅಮೆರಿಕ ಸಹಾಯ ಮಾಡುವುದಕ್ಕೆ ಇರಾನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಪರಿಣಾಮಗಳು ಭೀಕರವಾಗಿರಲಿವೆ. ಇದು ಇಸ್ರೇಲ್ ಹಾಗೂ ಇರಾನ್ ನಡುವಿನ ಸಮರವಾಗಿದೆ. ಹಾಗಾಗಿ, ಇದರಿಂದ ಅಮೆರಿಕ ದೂರ ಉಳಿಯಲೇಬೇಕು” ಎಂದು ಇರಾನ್ ಎಚ್ಚರಿಕೆ ನೀಡಿದೆ. ಈ ಕಾರಣಕ್ಕೆ ಭಾರತದ ರಾಯಭಾರ ಕಚೇರಿಯು ಸಹಾಯವಾಣಿ ತೆರೆದಿದೆ.