Ad Widget .

ಕಲಬುರಗಿ ವಿಳಾಸದಲ್ಲಿ ಹಿಂದೂ ಹೆಸರು ಸೇರಿಸಿದ್ದ ಉಗ್ರರು

ಸಮಗ್ರ ನ್ಯೂಸ್‌ : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿ ಪರಾರಿಯಾಗಿದ್ದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ, ಪಶ್ಚಿಮ ಬಂಗಾಳದ ಹೋಟೆಲ್‌ವೊಂದರಲ್ಲಿ ಕೊಠಡಿ ಪಡೆಯಲು ನಕಲಿ ವಿಳಾಸ ನೀಡಿದ್ದರು ಎಂಬುದು ತನಿಖೆಯಿಂದ ಪತ್ತೆಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

‘ಕೋಲ್ಕತ್ತ ಮಹಾನಗರಕ್ಕೆ ಹೊಂದಿಕೊಂಡಿರುವ ಪೂರ್ವ ಮೇದಿನಿಪುರ ಜಿಲ್ಲೆಯ ಹೋಟೆಲ್‌ನಲ್ಲಿ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ತಂಗಿದ್ದರು.

Ad Widget . Ad Widget . Ad Widget .

ಹೋಟೆಲ್‌ ಕೊಠಡಿಯಲ್ಲಿಯೇ ಇಬ್ಬರೂ ಸಿಕ್ಕಿಬಿದ್ದರು. ಇದೇ ಸಂದರ್ಭದಲ್ಲಿ ಹೋಟೆಲ್‌ ಗ್ರಾಹಕರ ಪಟ್ಟಿಯನ್ನು ಪರಿಶೀಲಿಸಿದಾಗ, ಅವರಿಬ್ಬರು ನಕಲಿ ಹೆಸರು ಹಾಗೂ ಅನ್ಯ ವಿಳಾಸ ಬರೆದಿದ್ದು ಗಮನಕ್ಕೆ ಬಂತು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ಅನಮೋಲ್ ಕುಲಕರ್ಣಿ (33) ತಂದೆ ಉದಯ್ ಕುಲಕರ್ಣಿ, ರಂಗ ನಿಲಯ, ವರದಾ ನಗರ, ಕಲಬುರಗಿ, ಕರ್ನಾಟಕ- ಆಧಾರ್ 8632 2668’ ಎಂಬುದಾಗಿ ಶಂಕಿತನೊಬ್ಬ ಗ್ರಾಹಕರ ಪಟ್ಟಿಯಲ್ಲಿ ಹಿಂದೂ ಹೆಸರು ಬರೆದಿದ್ದ. ಇನ್ನೊಬ್ಬ ಶಂಕಿತ, ‘ಯೂಸ್ ಶಹನವಾಜ್ (30) ತಂದೆ ಹರೂನ್ ಪಟೇಲ್, ಠಾಣೆ, ಮಹಾರಾಷ್ಟ್ರ – ಆಧಾರ್ 5158 9147′ ಎಂದೂ ಬರೆದಿದ್ದ. ಜೊತೆಗೆ, ಇಬ್ಬರೂ ನಕಲಿ ಆಧಾರ್ ಕಾರ್ಡ್‌ ಸಹ ನೀಡಿದ್ದರು. ಈ ಬಗ್ಗೆ ಹೋಟೆಲ್‌ ಸಿಬ್ಬಂದಿಯಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ನಗರದಿಂದ ಪರಾರಿಯಾಗಿದ್ದ ಮುಸಾವೀರ್, ಗುರುತು ಸಿಗಬಾರದೆಂದು ತಲೆ ಬೋಳಿಸಿದ್ದ. ಹೋಟೆಲ್‌ನಲ್ಲಿ ಮುಸಾವೀರ್ ಸೆರೆ ಸಿಕ್ಕಾಗ, ಚಿಕ್ಕ ಕೂದಲುಗಳು ಇದ್ದವು. ಈ ಬಗ್ಗೆ ಪ್ರಶ್ನಿಸಿದಾಗ, ತಲೆ ಬೋಳಿಸಿರುವುದಾಗಿ ಆತ ಹೇಳಿಕೊಂಡ’ ಎಂದು ಮೂಲಗಳು ಮಾಹಿತಿ ನೀಡಿವೆ.

ಕ್ಯಾಪ್ ಸುಳಿವು, ಜೈಲಿನಲ್ಲಿದ್ದ ಶಂಕಿತರ ಮಾಹಿತಿ: ‘ಬಾಂಬ್ ಇರಿಸಲು ಬಂದಿದ್ದ ಮುಸಾವೀರ್, ಕಂಪನಿಯೊಂದರ ಕ್ಯಾಪ್ ಧರಿಸಿದ್ದ. ಬಾಂಬ್ ಇಟ್ಟ ನಂತರ ನಗರದಿಂದ ಪರಾರಿಯಾಗಿದ್ದ ಈತ, ಹೊರ ಜಿಲ್ಲೆಯ ಶೌಚಾಲಯವೊಂದರಲ್ಲಿ ಬಟ್ಟೆ ಬದಲಿಸಿದ್ದ. ಅಲ್ಲಿಯೇ ಕ್ಯಾಪ್ ಬಿಟ್ಟು ಹೋಗಿದ್ದ. ಅದರೊಳಗೆ ಕೂದಲುಗಳು ಇದ್ದವು. ಕ್ಯಾಪ್ ಜಪ್ತಿ ಮಾಡಿದ್ದ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು’ ಎಂದು ಮೂಲಗಳು ಹೇಳಿವೆ.

Leave a Comment

Your email address will not be published. Required fields are marked *