Ad Widget .

ರಾಜಕೀಯ ಹಿತಾಸಕ್ತಿಗಾಗಿ ‘ಸೌಜನ್ಯ’ಕ್ಕೂ ನ್ಯಾಯದ ಮಾತನಾಡಿಲ್ಲ| ಸೌಜನ್ಯ ಪ್ರಕರಣದಲ್ಲಿ ಬಿಜೆಪಿ‌ – ಕಾಂಗ್ರೆಸ್ ಸಮಾನ ಪಾಲು ಪಡೆದಿದೆ – ತಿಮರೋಡಿ

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಪಾಂಗಾಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗದೇ ಇರುವ ಹಿನ್ನಲೆ ನೋಟಾ ಅಭಿಯಾನ ಹಮ್ಮಿದ ಕುರಿತಾಗಿ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಇಡೀ ಪ್ರಕರಣವನ್ನು ಮುಚ್ಚಿಹಾಕಿಸಿದ್ದು ಅಲ್ಲದೇ ಈ ಪ್ರಕರಣದಲ್ಲಿ ಕಾಂಗ್ರೆಸ್ ಕೂಡ ಪಾಲು ಇದೆ ಎಂದು ಹೋರಾಟಗಾರರು ಆರೋಪಿಸಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಹೇಶ್ ಶೆಟ್ಟಿ‌ ತಿಮರೋಡಿ, ಸೌಜನ್ಯ ಅತ್ಯಾಚಾರಗೈದ ಕಾಮಾಂದರಿಗೆ ಶಿಕ್ಷೆ ಆಗಿಲ್ಲ. ಸಂವಿಧಾನದ ಎಲ್ಲಾ ಅಂಗಗಳನ್ನು ಬೇಡಿಕೊಂಡರೂ ಸೌಜನ್ಯಳಿಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ನೋಟಾ ಅಭಿಯಾನ ಪ್ರಾರಂಭವನ್ನು ಮಾಡಿದ್ದೆವೆ . ಸಂವಿದಾನ ಏಕತೆಯನ್ನು ಬಹಿಷ್ಕಾರ ಮಾಡಿದಲ್ಲಿ ನಮ್ಮ ಮತದಾನದ ಹಕ್ಕು ಧರ್ಮವಲ್ಲ ಎಂಬ ನೆಲೆಯಲ್ಲಿ ನೋಟಾ ಅಭಿಯಾನ ಮಾಡಲು ಹೊರಟಿದ್ದೇವೆ, ಎಂದರು.

Ad Widget . Ad Widget . Ad Widget .

ಇಡೀ ಪ್ರಕರಣವನ್ನು ಕೊಲೆ ಆದ ಸಂದರ್ಭದಲ್ಲಿ ಇದೇ ಬಿಜೆಪಿಯೇ ಹಳ್ಳ ಹಿಡಿಸಿದ್ದು ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಕಾಂಗ್ರೆಸ್ ಏನು ಇದರಿಂದ ಹೊರತಾಗಿಲ್ಲಾ ಎಂದು ಹೇಳಿದರು . ಅಲ್ಲಿ 2002 ರಿಂದ 12ರ ವರೆಗೆ ನಾಲ್ಕುನೂರು ಹೆಣ್ಣಿನ ಅತ್ಯಾಚಾರ ಕೊಲೆ ಆಗಿದೆ ಅದನ್ನು ತನಿಖೆ ಬೇಡವೇ . ಒಕ್ಕಲಿಗರು ಇರುವ ನಾವು ಒಂದು ಮನೆಯಿಂದ ನಾಲ್ಕು ಮತಗಳನ್ನು ನೋಟ ನೀಡಿ ಒಕ್ಕಲಿಗರೆ ಮನವಿ ಮಾಡಿದರು. ಆ ಮಗುವಿಗೆ ಸಮರ್ಪಣೆ ಮಾಡಿ ಎಂದು ಹೇಳಿದರು . 12 ವರ್ಷಗಳಿಂದ ಈಗ ಅಲ್ಲಿ ಕೊಲೆ ಅತ್ಯಾಚಾರ ಆಗುತ್ತಿಲ್ಲ ಯಾಕೆ ಅಂದರೆ ನಾವು ಬೀದಿಯಲ್ಲಿ ಇರುವ ಕಾರಣಕ್ಕೆ ಆಗಿಲ್ಲಾ ಅಷ್ಟೇ ಎಂದು ಹೇಳಿದರು.

12 ವರ್ಷಗಳಿಂದ ನ್ಯಾಯಕ್ಕಾಗಿ ಪರದಾಡುತ್ತಿದ್ದೇವೆ. ತಾಳ್ಮೆಯಲ್ಲಿ ಇದ್ದೇವೆ . ನಿಮ್ಮ ಜಾತಿಯ ಬಲದಿಂದ ಹಿಂದುತ್ವ ಬಡವಾಗಲಿದೆ . ನೋಟ ಮಾಡುವ ಮೂಲಕ ಸುಪ್ರೀಂ ಕೋರ್ಟ್ ಕಣ್ಣು ತೆರೆಸಲು ಸಾಧ್ಯವೆಂದು ಹೇಳಿದರು ಈ ಹಿನ್ನೆಲೆಯಲ್ಲಿ ನಾವು ನಿಮ್ಮಲ್ಲಿ ನೋಟ ಬಿಕ್ಷೆಯನ್ನು ಬೇಡುತ್ತಿದ್ದೆವೆ ಸುಪ್ರೀಂನಲ್ಲಿ ಹೆಣ್ಣಿಗೆ ನ್ಯಾಯ ಕೊಡಿಸಲು ಸನಾತನ ತಾಯಂದಿರು ರಕ್ಷಣಗೆ ನೋಟ ಕೇಳುತ್ತಿದ್ದವೆ ಎಂದು ಹೇಳಿದರು .

ಹೋರಾಟಗಾರ ಕರುಣಾಕರ ಬರೆಮೇಲು ಮಾತನಾಡುತ್ತಾ, ಹೋರಾಟಕ್ಕೆ ಬೆಂಬಲ ಕೊಡಬೇಕು , ಸುಳ್ಯ ಜನತೆ ನೋಟ ಅಭಿಯಾನದಲ್ಲಿ ಭಾಗಿಯಾಗಬೇಕು. ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ನಿಮ್ಮ ಮತಗಳೇ ಅಧಾರವಾಗಲಿದೆ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನಾವು ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತೆವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತಮ್ಮಣ್ಣ ಶೆಟ್ಟಿ ಮತನಾಡುತ್ತಾ ಕಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿ ಸಿಗುತ್ತಾರೆ ಆದರೆ ಓರ್ವ ಹೆಣ್ಣಿನ ಅತ್ಯಚಾರ ಕೊಲೆಯ ಆರೋಪಿಗಳು ಸಿಕ್ಕಿಲ್ಲ ಇದು ಏನನ್ನು ಸೂಚಿಸುತ್ತದೆ ಹಾಗಿದ್ದರೆ ರಾಜಕಟರಣಿಗಳು ಎಷ್ಟು ಬ್ರಷ್ಟರು ಎಂಬುವುದು ಇದರಲ್ಲೆ ತಿಳಿಯುತ್ತದೆ ಎಂದು ಹೇಳಿದರು. ಕೆದಂಬಾಡಿ ರಾಮಯ್ಯ ಗೌಡರು ಹೋರಾಡಿದ ಈ ಮಣ್ಣಿನ ಮಗ ಅವರು ಅಂದು ಬ್ರಿಟಿಷರ ವಿರುದ್ದ ಹೋರಾಡಿದವರು ಇಂದು ಅವರ ಆದರ್ಶದಂತೆ ನಾವು ಹೋರಾಟ ಮಾಡುತ್ತೆವೆ ನಿಮ್ಮೆಲ್ಲರ ಸಹಕಾರ ನಮಗೆ ಅಗತ್ಯತೆ ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಲಜಾಕ್ಷ ಭೂತಕಲ್ಲು , ನ್ಯಾಯವಾದಿ ಮೋಹಿತ್ , ಜಯಂತ್ ಟಿ ನೀತಿ ತಂಡದ ಮುಖ್ಯಸ್ಥರು, ಎನ್ ವಸಂತ್ ಸೇರಿದಂತೆ ಸುಳ್ಯದ ಸೌಜನ್ಯ ಹೋರಾಟಗಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *